ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣ: 30 ಭಕ್ತರು ದುರ್ಮರಣ, 60ಕ್ಕೂ ಹೆಚ್ಚು ಜನರಿಗೆ ಗಾಯ!

0
Spread the love

ಪ್ರಯಾಗ್‌ರಾಜ್:- ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಭಕ್ತರು ದುರ್ಮರಣ ಹೊಂದಿದ್ದು, 60ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

Advertisement

ಈ ಸಂಬಂಧ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಮಾತನಾಡಿ, ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾಕುಂಭ ಸ್ಥಳದಲ್ಲಿ ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ್ದಾರೆ. 25 ಶವಗಳನ್ನು ಗುರುತಿಸಲಾಗಿದೆ. ಕಾಲ್ತುಳಿತದಿಂದ 60 ಮಂದಿ ಗಾಯಗೊಂಡಿದ್ದಾರೆ. ಹಲವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದರು.

ಇನ್ನೂ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾದ ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡಲು ಅನೇಕ ಯಾತ್ರಾರ್ಥಿಗಳ ನಡುವೆ ಜಾಗಕ್ಕಾಗಿ ಮಹಾ ಕುಂಭದ ಸಂಗಮ್ ಪ್ರದೇಶದಲ್ಲಿ ಮುಂಜಾನೆ ನೂಕುನುಗ್ಗಲು ಉಂಟಾಗಿದೆ. ಕಾಲ್ತುಳಿತ ಸಂಭವಿಸುವ ಮೊದಲು ಅನೇಕ ಜನರು ಬ್ಯಾರಿಕೇಡ್‌ಗಳನ್ನು ಒಡೆದು ನುಗ್ಗಿದ್ದಾರೆ. ಪರಿಣಾಮವಾಗಿ ಸಾವು-ನೋವುಗಳಾಗಿವೆ.


Spread the love

LEAVE A REPLY

Please enter your comment!
Please enter your name here