ವಿಜಯಸಾಕ್ಷಿ ಸುದ್ದಿ, ಗದಗ: ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯು ಇನ್ನರ್ ವ್ಹೀಲ್ ಇಂಟರ್ನ್ಯಾಷನಲ್‌ನ 101ನೇ ಸಂಸ್ಥಾಪನಾ ದಿನಾಚಾರಣೆಯನ್ನು ದಾಂಡೇಲಿ ರೆಸಾರ್ಟ್ನಲ್ಲಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ನಾಗರತ್ನಾ ಮಾರನಬಸರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವ್ಯಾಪಾರಿ ಮತ್ತು ಮ್ಯಾಂಚೆಸ್ಟರ್ ರೋಟೇರಿಯನ್ ಅವರ ಪತ್ನಿ ಮಾರ್ಗರೆಟ್ ಗೋಲ್ಡಿಂಗ್ ವೃತ್ತಿಯಲ್ಲಿ ನರ್ಸ್ ಆಗಿದ್ದು, ಇವರು ಇನ್ನರ್ ವೀಲ್ ಸಂಸ್ಥೆಯನ್ನು ಪ್ರಾರಂಭಿಸಿಸಲು ಪ್ರೇರಣೆ ನೀಡಿದರು. ಶತಮಾನದ ಹಿಂದೆ ಪ್ರಾರಂಭವಾದ ಇನ್ನರ್ ವ್ಹೀಲ್ ಸಂಸ್ಥೆಯು ಇಂದು ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಸಂಸ್ಥೆಯನ್ನು ಹೊಂದಿದ್ದು, ಸೇವೆ, ಸ್ನೇಹ ಮತ್ತು ಸೇವೆಯ ಆದರ್ಶಗಳನ್ನು ಪ್ರೋತ್ಸಾಹಿಸುವುದು ಸಂಸ್ಥೆಯ ಉದ್ಧೇಶವಾಗಿದೆ ಎಂದರು.
ಸಂಸ್ಥೆಯ ಸದಸ್ಯರಿಗಾಗಿ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಆಶಾ ಪಟ್ಟಣಶೆಟ್ಟಿ, ಪುಷ್ಪ ಭಂಡಾರಿ ಮುಂತಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಶ್ರೇಯಾ ಪವಾಡಶೆಟ್ಟರ್, ಜ್ಯೋತಿ ದಾನಪ್ಪಗೌಡರ, ಸುಶೀಲಾ ಕೋಟಿ, ಸುಶೀಲಾ ಬಾಗಮಾರ, ಆಶಾ ಹುಕ್ಕೇರಿ, ಸುಮಾ ಪಾಟೀಲ್, ಸಂಧ್ಯಾ ಕೋಟಿ, ಶುಭ ಕುಂದಗೋಳ, ಸುನಂದ ಬೂಮರೆಡ್ಡಿ, ಮೀನಾಕ್ಷಿ ಕೊರವಣ್ಣವರ್, ರೇಖಾ ರೊಟ್ಟಿ, ಉಮಾ ಮುನವಳ್ಳಿ, ಸುವರ್ಣ ಮದರಿಮಠ, ಶಿಲ್ಪಾ ವೀರಲಿಂಗಯ್ಯನಮಠ, ಪುಷ್ಪ ಕೊರವಣ್ಣವರ, ಮೀನಾಕ್ಷಿ ಕೊರವಣ್ಣವರ ಮುಂತಾದವರು ಭಾಗವಹಿಸಿದ್ದರು.