ವಿಜಯಸಾಕ್ಷಿ ಸುದ್ದಿ, ಗದಗ: ಉತ್ತರ ಕರ್ನಾಟಕದ ಗ್ರಾಮೀಣ ಭಾಗಕ್ಕೆ ತಾಂತ್ರಿಕ ಶಿಕ್ಷಣದಲ್ಲಿ ಹೆಸರುವಾಸಿಯಾಗಿ 40 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಅಂಜುಮನ್-ಎ-ಇಸ್ಲಾಂ ಪಾಲಿಟೆಕ್ನಿಕ್‌ನಲ್ಲಿ ವಿ.ಪ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದಲ್ಲಿ ಒದಗಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಉಧ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಸಿಬ್ಬಂದಿಗಳು ಶುದ್ಧ ನೀರಿನ ಉಪಯೋಗ ಪಡೆದುಕೊಳ್ಳಬೇಕು. ಮನುಷ್ಯನ ದೇಹದಲ್ಲಿ ಕಲುಷಿತ ನೀರಿನಿಂದ ಶೇ.80ರಷ್ಟು ರೋಗಗಳು ಬರುತ್ತವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ತಿಳಿಸಿದರು.
ವೈದ್ಯಕೀಯ ಸಮಾಲೊಚನೆ ಮತ್ತು ಪ್ರಥಮ ಚಿಕ್ಸಿತಾ ಘಟಕವನ್ನು ಗದಗಿನ ಖ್ಯಾತ ವೈದ್ಯರಾದ ಡಾ. ಶ್ರೀಧರ ಕುರಡಗಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಖಲೀಕ ಅಹಮದ ಮುಲ್ಲಾ ವಹಿಸಿದ್ದರು. ಸಂಸ್ಥೆಯ ಡಿ.ಎಂ. ಕೊಪ್ಪಳ, ಎಮ್.ಐ. ಕಮಾನಗಾರ, ಶಬ್ಬಿರ ಅಬ್ಬಿಗೇರಿ, ಎ.ಎಮ್. ಮಿಶ್ರಿಕೋಟಿ ಉಪಸ್ಥಿತರಿದ್ದರು.
ಪ್ರಾಚಾರ್ಯ ಕಿಶೋರ ಎನ್.ರೇವಣಕರ ಪ್ರಾಸ್ತಾವಿಕ ನ್ಮಡಿಗಳನ್ನಾಡಿದರು. ಅಂಜುಮನ-ಎ-ಇಸ್ಲಾಂ ಪಾಲಿಟೆಕ್ನಿಕ್, ಕರ್ನಾಟಕ ಪದವಿಪೂರ್ವ ಕಾಲೇಜು, ಅಂಜುಮನ ಇಸ್ಲಾಂ ಐ.ಟಿ.ಐ.ಗಳ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಆರ್.ಸಿ. ಕೋಟಿ ಸ್ವಾಗತಿಸಿದರು. ಕುಮಾರಸ್ವಾಮಿ ಟಿ.ಹೆಚ್. ನಿರೂಪಿಸಿದರು. ಎಸ್.ಎ. ತಡೂಳ ವಂದಿಸಿದರು.