ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಇಲ್ಲಿಯ ಮಾರುತಿ ನಗರದ ಸರಕಾರಿ ಹಿರಿಯ ಪ್ರಾಥಮಿಕ(ಡಿ.ಪಿ.ಇ.ಪಿ) ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ಗುರಿಕಾರ ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಶ್ರೀಗಳು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳು ರಾಷ್ಟಾçಭಿಮಾನದೊಂದಿಗೆ ಸ್ಪರ್ಧಾತ್ಮಾಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಪೂರಕ ಕಲಿಕಾ ವಾತವಾರಣ, ಟಿ.ವಿ., ಮೊಬೈಲ್ನ ಗೀಳು ತಪ್ಪಿಸಬೇಕು. ಶಿಕ್ಷಕರ ಮಾರ್ಗದರ್ಶನದಂತೆ ಶಿಕ್ಷಣ ದಿನಚರಿಯನ್ನು ರೂಢಿಸಬೇಕು ಎಂದರು.
ಶಾಲೆಗೆ ವಿವಿಧ ವಸ್ತುಗಳನ್ನು ದೇಣಿಗೆ ನೀಡಿದ ಚನ್ನಪ್ಪ ಹಡಗಲಿ ಹಾಗೂ ವಿನಾಯಕ ಡಿಗ್ಗಾವಿ ಅವರನ್ನು ಸನ್ಮಾನಿಸಲಾಯಿತು. ಕಳೆದ ವರ್ಷ 7ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ವರದಿ ವಾಚನ ಮಂಡಿಸುತ್ತಾ, 234 ಮಕ್ಕಳಲ್ಲಿ 210 ಮಕ್ಕಳನ್ನು ಕಾರ್ಯಕ್ರಮದಲ್ಲಿ ತೊಡಗಿಸಿ ಸರಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಮಕ್ಕಳಿಗೆ ನೀಡುತ್ತಿರುವುದು ಸಂತೋಷ ನೀಡಿದೆ. ಕ್ರೀಯಾಶೀಲ ಎಸ್.ಡಿ.ಎಂ.ಸಿ, ಗ್ರಾ.ಪಂಗಳ ಸಹಕಾರದಿಂದ ಶಾಲೆಯ ವಿವಿಧ ಅಭಿವೃದ್ಧಿ ಕಾರ್ಯಗಳು ಪ್ರಾಮಾಣಿಕವಾಗಿ ನಡೆದಿವೆ ಎಂದರು.
ಗ್ರಾ.ಪಂ ಸದಸ್ಯರಾದ ಲಕ್ಷ್ಮಣ ಗುಡಸಲಮನಿ, ಶಿವಪ್ಪ ಬಳಿಗೇರ, ಶಾಂತಮ್ಮ ಮಣಕವಾಡ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಪಾಲಕರು, ಶಿಕ್ಷಕರು ಉಪಸ್ಥಿತರಿದ್ದರು. ಮಹಾಲಕ್ಷಿö್ಮ ದೊಡ್ಡಮನಿ ಸ್ವಾಗತಿಸಿದರು. ಅಶ್ವಿನಿ ಕೆ.ವಿ ನಿರೂಪಿಸಿ ವಂದಿಸಿದರು.



