ಬೆಂಗಳೂರು: ರಾಜ್ಯದ ಅಧ್ಯಕ್ಷ ಆಗಿ ನಾನು ಯಾವುದೇ ಜಿಲ್ಲೆಗೆ ಅಭಿಪ್ರಾಯ ಕೊಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂಸದ ಸುಧಾಕರ್ ಟೀಕೆಗೆ ಅಸಮಾಧಾನ ಹೊರಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸುಧಾಕರ್ ಅವರ ಆಕ್ರೋಶದ ಮಾತು ನೋಡಿದೆ. ದಯವಿಟ್ಟು ಈ ರೀತಿ ಮಾತಾಡಲು ಹೋಗಬೇಡಿ. ರಾಜ್ಯದ ಅಧ್ಯಕ್ಷ ಆಗಿ ನಾನು ಯಾವುದೇ ಜಿಲ್ಲೆಗೆ ಅಭಿಪ್ರಾಯ ಕೊಟ್ಟಿಲ್ಲ.
ನಾನು ಅಭಿಪ್ರಾಯ ಕೊಡಲು ಸಾಧ್ಯವೂ ಇಲ್ಲ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಚುನಾವಣಾಧಿಕಾರಿ ಆಗಿದ್ರು. ೧೩ ಜನ ವೀಕ್ಷಕರು ಇದ್ರು. ಇವ್ರು ಜಿಲ್ಲೆಯಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತಗೊಂಡು ಜಿಲ್ಲೆಗೆ ತಲಾ ಮೂರು ಹೆಸರು ಹೈಕಮಾಂಡ್‌ಗೆ ಕಳಿಸಿಕೊಟ್ಟಿದ್ರು. ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ, ಶೂನ್ಯ ಎಂದರು.
ಇನ್ನೂ ನನ್ನ ಜಿಲ್ಲೆಗೆ ನಾನು ಅಭಿಪ್ರಾಯ ಕೊಡಬಹುದೇ ಹೊರತು, ಬೇರೆ ಜಿಲ್ಲೆಗೆ ಅಭಿಪ್ರಾಯ ಕೊಡುವ ಅಧಿಕಾರ ನನಗೆ ಇಲ್ಲ. ಸುಧಾಕರ್ ಅವರಿಗೆ ಇದನ್ನು ಹೇಳಲು ಇಷ್ಟಪಡ್ತೇನೆ. ವಿಜಯೇಂದ್ರ ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದಾರೆ ಅಂತ ಸುಧಾಕರ್ ಹೇಳಿದ್ದಾರೆ. ಸುಧಾಕರ್ ಅವರು ಹಿರಿಯರು, ಹೀಗೆಲ್ಲ ಮಾತಾಡಬಾರದು ಎಂದು ಮನವಿ ಮಾಡಿದರು.