ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ವಿಚಾರವಾಗಿ ಮಾದಿಗ ಮತ್ತು ಸಂಬಂಧಿತ ಜನಾಂಗಳಿಗೆ ಕನಿಷ್ಠ ಶೇ.6 ಒಳಮೀಸಲಾತಿ ಅಥವಾ ಪ್ರತ್ಯೇಕ ಪರಿಶಿಷ್ಟ ಜಾತಿಯ ಶಾ.6 ಮೀಸಲಾತಿಗಾಗಿ ಶಿಫಾರಸ್ಸು ಮಾಡುವಂತೆ ಆದಿ ಜಾಂಬವ ಯುವ ಬ್ರಿಗೇಡ್‌ನ ಬೆಳಗಾವಿ ವಿಭಾಗೀಯ ಸಂಚಾಲಕ ಮಂಜುನಾಥ ಬುರಡಿ ಒತ್ತಾಯಿಸಿದರು.
ಈ ಕುರಿತು ಆದಿ ಜಾಂಬವ ಯುವ ಬ್ರಿಗೇಡ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನೊಂದ ಮತ್ತು ನಿಷ್ಠ ಅವಕಾಶಗಳಲ್ಲಿ ಅನ್ಯಾಯ ಅನುಭವಿಸುತ್ತಿರುವ ಜನಾಂಗಗಳು ಒಳಮೀಸಲಾತಿಗಾಗಿ ನ್ಯಾಯಯುತವಾದ ಹಕ್ಕೊತ್ತಾಯ ಮಾಡುತ್ತಿವೆ. ಆ ನಿಟ್ಟಿನಲ್ಲಿ ಪ್ರಾಯೋಗಿಕ ದತ್ತಾಂಶಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಮಾಡುವ ಅವಕಾಶ ತಮಗೆ ಲಭಿಸಿರುವುದು ನೊಂದ ಮತ್ತು ಅನ್ಯಾಯಕ್ಕೆ ಒಳಗಾದ ಜನಾಂಗಗಳಿಗೆ ಒಂದು ದೊಡ್ಡ ಭರವಸೆ ಮೂಡಿಸಿದೆ ಎಂದರು.
ಮಾದಿಗ ಮತ್ತು ಸಂಬಂಧಿತ ಜನಾಂಗಗಳಿಗೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ 69 ಒಳಮೀಸಲಾತಿ ನೀಡಲು ಶಿಫಾರಸ್ಸು ಮಾಡಬೇಕು. ನೊಂದ ಮಾದಿಗ ಮತ್ತು ಸಂಬಂಧಿತ ಜನಾಂಗಕ್ಕೆ ಒಳಮೀಸಲಾತಿ ಅನಿವಾರ್ಯವಾಗಿದ್ದು, ಇದನ್ನು ಕೂಡಲೇ ಜಾರಿ ಮಾಡುವ ಅಗತ್ಯತೆಯ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಾ. ಬಾಬು ಜಗಜೀವನರಾಮ ಆದಿ ಜಾಂಬವ ಯುವ ಬ್ರಿಗೇಡ್‌ನ ಬೆಳಗಾವಿ ವಿಭಾಗೀಯ ಸಂಚಾಲಕ ಮಂಜುನಾಥ ಬುರಡಿ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಡಿ.ಜಿ. ಕಟ್ಟಿಮನಿ, ಉಡಚಪ್ಪ ಹಳ್ಳಿಕೇರಿ, ಅಶೋಕ ಕುಡತಿನಿ, ಪ್ರವೀಣ ತಗ್ಗೆನಮನಿ, ಯಮನೂರ ಮಾದರ, ರಾಘವೇಂದ್ರ ಪರಾಪೂರ ಮುಂತಾದವರು ಇದ್ದರು.