ವಿಜಯಸಾಕ್ಷಿ ಸುದ್ದಿ, ಕೊಪ್ಪಳ
Advertisement
ಸಾರಿಗೆ ನೌಕರರ ಮುಷ್ಕರ ವಿಫಲಗೊಳಿಸುವ ಆತುರದಲ್ಲಿ ಅಧಿಕಾರಿಗಳು ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ!
ಸಾರಿಗೆ ನೌಕರರು ಗೈರಾಗಿದ್ದರಿಂದ ಲಭ್ಯ ಇರುವ ಬಸ್ಗಳ ಜೊತೆಗೆ ಖಾಸಗಿ ವಾಹನಗಳನ್ನು ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ನಿಲ್ಲಿಸಲು ಪರವಾನಗಿ ನೀಡಿದ್ದರು.
ಪರವಾನಗಿ ನೀಡುವ ಭರದಲ್ಲಿ ಯಲ್ಲೋ ಬೋರ್ಡ್ ವಾಹನಗಳ ಜೊತೆಗೆ ವೈಟ್ ಬೋರ್ಡ್ ವಾಹನಗಳನ್ನು ಅಧಿಕಾರಿಗಳ ಮುಂದೆಯೇ ನಿಲ್ಲಿಸಲಾಯಿತು.
ಅಧಿಕಾರಿಗಳು ಸಹ ಮುಷ್ಕರ ಹತ್ತಿಕ್ಕುವ ಭರದಲ್ಲಿ ವೈಟ್ ಬೋರ್ಡ್ ವಾಹನಗಳಿಗೆ ಹಸಿರು ನಿಶಾನೆ ತೋರಿದರು.