ವಿಜಯಸಾಕ್ಷಿ ಸುದ್ದಿ, ಗದಗ: ಡಾ. ವ್ಹಿ.ವ್ಹಿ. ಹಿರೇಮಠರವರನ್ನು 1ನೇ ಜನವರಿ 2025ಕ್ಕೆ ಅನ್ವಯವಾಗುವಂತೆ ಗದಗ ಜಿಲ್ಲೆಯ ಸಾಮಾಜಿಕ ಸುಧಾರಣಾ ವೇದಿಕೆಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
Advertisement
ಡಾ. ವ್ಹಿ.ವ್ಹಿ. ಹಿರೇಮಠರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ನಿರಂತರವಾಗಿ ಸಮಾಜ ಸೇವೆ ಮತ್ತು ಸಾಹಿತ್ಯ ಸೇವೆ ಮಾಡುತ್ತಾ ಬಂದಿದ್ದಾರೆ. ಇವರ ಸಾಮಾಜಿಕ ಹಾಗೂ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಕೂಡ ಬಂದಿವೆ. ಇವರು ಸಂಘಟನೆಯ ನಿರ್ದೇಶನ ಹಾಗೂ ನಿಯಮಗಳಿಗನುಸಾರವಾಗಿ ತಮ್ಮದೇ ಆದ ತಂಡವನ್ನು ರಚಿಸಿಕೊಂಡು, ಗದಗ ಜಿಲ್ಲೆಯ ಹಿತಾಸಕ್ತಿಗೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ವೇದಿಕೆ ಅಧ್ಯಕ್ಷರಾದ ಭಾರತ್ ಧ್ವಜ್ ತಿಳಿಸಿದ್ದಾರೆ.