ಮುಡಾ ದೂರುದಾರನಿಗೆ ಸಂಕಷ್ಟ: ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿದ ಕೋರ್ಟ್!

0
Spread the love

ಬೆಂಗಳೂರು: ಮುಡಾ ದೂರುದಾರನಿಗೆ ಸಂಕಷ್ಟ ಎದುರಾಗಿದ್ದು, ಸ್ನೇಹಮಯಿ ಕೃಷ್ಣಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಚೆಕ್​ ಬೌನ್ಸ್​ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದಾರೆ. ಕುಮಾ‌ರ್ ಎಂಬುವವರು ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು ಜನವರಿ 30 ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಆರೋಪ ಸಾಬೀತಾಗಿದ್ದರಿಂದ ಕೋರ್ಟ್​ ಶಿಕ್ಷೆ ವಿಧಿಸಿದೆ. ಆದ್ರೆ, ಶಿಕ್ಷೆಯ ಪ್ರಮಾಣ ಮಾತ್ರ ಪ್ರಕಟಿಸಿಲ್ಲ.

Advertisement

ಪತ್ರಿಕೆ ನಡೆಸಲು ಹಾಗೂ ಗೃಹೋಪಯೋಗಕ್ಕಾಗಿ ಕುಮಾ‌ರ್ ಎಂಬುವವರಿಂದ ಕೃಷ್ಣ ಅವರು 2015ರಲ್ಲಿ 1.75 ಲಕ್ಷ ರೂ ಸಾಲ ಪಡೆದಿದ್ದರು. ಈ ಸಂಬಂಧ ಸ್ನೇಹಮಯಿ ಕೃಷ್ಣ ಅವರು ಕೋಅಪರೇಟಿವ್ ಬ್ಯಾಂಕ್ ಚೆಕ್ ನೀಡಿದ್ದರು. ಈ ಚೆಕ್​ಅನ್ನು ಕುಮಾರ್ ಅವರು ಬ್ಯಾಂಕ್​ಗೆ ಹಾಕಿದಾಗ ಬೌನ್ಸ್​ ಆಗಿತ್ತು.

ಈ ಹಿನ್ನೆಲೆಯಲ್ಲಿ ಕುಮಾರ್ ಅವರು ಸ್ನೇಹಮಯಿ ಕೃಷ್ಣ ಕೋರ್ಟ್​ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಜೆಎಂಎಫ್ ಸಿ ನ್ಯಾಯಾಲಯವು, ಸ್ನೇಹಮಯಿ ಕೃಷ್ಣಗೆ ಶಿಕ್ಷೆ ವಿಧಿಸಿದೆ. ಆದ್ರೆ, ಶಿಕ್ಷೆ ಪ್ರಮಾಣ ಎಷ್ಟು? ಏನು ಎನ್ನುವುದು ಮಾತ್ರ ಪ್ರಕಟಿಸಿಲ್ಲ ಎನ್ನಲಾಗಿದೆ.

ಈ ಸಂಬಂಧ ಸ್ನೇಹಮಹಿ ಕೃಷ್ಣ ಮಾತನಾಡಿ, ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ, ನನಗೆ ಕುಮಾರ್ ಸಾಲವನ್ನೇ ನೀಡಿರಲಿಲ್ಲ. ನನಗೆ ಸಮಸ್ಯೆ ಇದ್ದ ಕಾರಣ ಸಾಲ ಕೇಳಿದ್ದೆ. ಸಾಲ ಕೊಡುವುದಾಗಿ ಹೇಳಿ ದಿನಾಂಕ‌ ನಮೂದಿಸದ ಚೆಕ್ ಪಡೆದಿದ್ದ. ನಂತರ ಸಾಲವನ್ನು ಕೊಡದೆ ಚೆಕ್‌ನ್ನು ಬ್ಯಾಂಕ್‌ಗೆ ಪ್ರೆಸೆಂಟ್ ಮಾಡಿದ್ದ. ನಂತರ ಚೆಕ್ ಬೌನ್ಸ್ ಮಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ. ಈ ಸಂಬಂಧ ನನ್ನ ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.


Spread the love

LEAVE A REPLY

Please enter your comment!
Please enter your name here