ಮಹಾಕುಂಭದಲ್ಲಿ ಮಿಂದೆದ್ದ ರಾಜ್​​ ಬಿ ಶೆಟ್ಟಿ, ಅನುಶ್ರೀ, ಕಿರಣ್​ ರಾಜ್​​

0
Spread the love

ಉತ್ತರ ಪ್ರದೇಶದ ಪ್ರಯಾಗ್​​ರಾಜ್​​ನಲ್ಲಿ 2025ರ ಕುಂಭಮೇಳ ನಡೆಯುತ್ತಿದ್ದು ಕೋಟ್ಯಾಂತರ ಭಕ್ತರು ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರೂ ಸೇರಿದಂತೆ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾ ಸೆಲೆಬ್ರಿಟಿಗಳೂ ಸೇರಿದಂತೆ ಕೋಟ್ಯಂತರ ಭಕ್ತರು ಪವಿತ್ರ ನೀರಿನಿಲ್ಲಿ ಮಿಂದೆದಿದ್ದಾರೆ. ಅಂತೆಯೇ ನಟಿ ಅನುಶ್ರೀ, ರಾಜ್​​ ಬಿ ಶೆಟ್ಟಿ ಸೇರಿದಂತೆ ಇನ್ನೂ ಕೆಲವರು ಕುಂಭಮೇಳದಲ್ಲಿ ಭಾಗಿಯಾಗಿ ಪವಿತ್ರಾ ಸ್ನಾನ ಮಾಡಿದ್ದಾರೆ.

Advertisement

ಕುಂಭಮೇಳದಲ್ಲಿ ಭಾಗಿಯಾದ ಸಂಭ್ರಮದ ಕ್ಷಣಗಳನ್ನು ಅನುಶ್ರೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ”ಸಂಗಮದಲ್ಲಿ ಮಿಂದು, ಕಣ್ಣುಗಳು ನೆಂದು, ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು! ಕೋಟಿ ಜನ ಸೇರೋ ಜಾಗ, ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ರೆ ಈ ದೈವಿಕ ಅನುಭವ ಸಿಗ್ತಿರ್ಲಿಲ್ಲ! ಮೌನಿ ಅಮಾವಾಸ್ಯೆ, ಹರ ಹರ ಮಹದೇವ್!” ಎಂದು ಅನುಶ್ರೀ ಬರೆದುಕೊಂಡಿದ್ದಾರೆ.

ಕುಂಭಮೇಳದಲ್ಲಿ ಭಾಗಿಯಾದ ಫೋಟೋಗಳನ್ನು ನಟ ರಾಜ್​​ ಬಿ ಶೆಟ್ಟಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಮಹಾ ಕುಂಭ ಮತ್ತು ಭಾಗವಹಿಸಿದವರು ಎಂಬ ಕ್ಯಾಪ್ಷನ್​ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here