ದೇವನಹಳ್ಳಿ: ಯೂ ಟರ್ನ್ ಪಡೆಯುತ್ತಿದ್ದ ಬೈಕ್ಗೆ ಲಾರಿ ಡಿಕ್ಕಿಯಾಗಿ ಒರ್ವ ಸ್ಥಳದಲ್ಲೆ ಸಾವನ್ನಪ್ಪಿ, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ನಡೆದಿದೆ.
ಅಪಘಾತದ ರಬಸಕ್ಕೆ ರಸ್ತೆಯಲ್ಲೆ ಮೃತ ದೇಹ ನಜ್ಜುಗುಜ್ಜಾಗಿದೆ. ಅವೈಜ್ಞಾನಿಕ ಯೂಟರ್ನ್ ನಿಂದ ಪದೇ ಪದೇ ಕನ್ನಮಂಗಲ ಬಳಿ ಅಪಘಾತಗಳು ನಡೆಯುತ್ತಿವೆ. ಮೃತ ದುರ್ದೈವಿಗಳು ಬಳ್ಳಾರಿ ಮೂಲದವರು ಎಂದು ಮಾಹಿತಿ ತಿಳಿದು ಬಂದಿದೆ. ಮೃತ ವ್ಯಕ್ತಿ ಫ್ರಶ್ ಟು ಹೋಮ್ ಕಂಪನಿಯಲ್ಲಿ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಕೆಂಪೇಗೌಡ ಏರ್ಪೋಟ್ ಸಂಚಾರಿ ಪೊಲೀಸರ ಬೇಟಿ ಪರಿಶೀಲನೆ ನಡೆಸಿ, ಮೃತ ವ್ಯಕ್ತಿಗಳನ್ನು ಸ್ಥಳೀಯ ಆಕಾಶ ಅಸ್ಪತ್ರೆಗೆ ರವಾನಿಸಿದ್ದಾರೆ.



