ಕ್ರೀಡೆಯೇ ಸರ್ವಸ್ವವೆಂದ ಪ್ರಕಾಶ ಕಾಳೆ

0
Spread the love

ಪ್ರಕಾಶ ಕಾಳೆಯವರು ಎಸ್.ಆರ್.ಎ.ಜಿ.ಎ. ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ 01-07-1997ರಿಂದ ಸುದೀರ್ಘ 28 ವರ್ಷ 6 ತಿಂಗಳ ಸೇವೆಯನ್ನು ಸಲ್ಲಿಸಿ, 31-01-2025ರಂದು ಸೇವಾ ನಿವೃತ್ತಿಯನ್ನು ಹೊಂದಲಿದ್ದಾರೆ. ಇವರಿಗೆ ಮಾಜಿ ಶಾಸಕ ಡಿ.ಆರ್. ಪಾಟೀಲ ಸದಾ ಬೆಂಬಲವಾಗಿ ನಿಂತು, ಸಂಸ್ಥೆಯಲ್ಲಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

Advertisement

ಕಾಳೆಯವರು 01-02-1965ರಂದು ಹುಯಿಲಗೋಳ ಗ್ರಾಮದ ಚಂದಪ್ಪ-ಸುಮಿತ್ರವ್ವ ಕಾಳೆ ದಂಪತಿಗಳಿಗೆ ಮೂರನೇ ಮಗನಾಗಿ ಜನಿಸಿದರು. ಪ್ರಾಥಮಿಕ ಶಾಲೆಯನ್ನು ಸ್ವ-ಗ್ರಾಮದಲ್ಲಿ ಮುಗಿಸಿ, ಮಾಧ್ಯಮಿಕ ಶಾಲೆಯನ್ನು ಎಚ್.ಸಿ.ಇ.ಎಸ್. ಪ್ರೌಢಶಾಲೆ, ಗದಗದಲ್ಲಿ ಮುಗಿಸಿ ಮುಂದೆ ಕೆ.ವ್ಹಿ.ಎಸ್.ಆರ್. ಪ.ಪೂ. ಕಾಲೇಜಿನಲ್ಲಿ ಪಿ.ಯು.ಸಿ. ಮುಗಿಸಿದರು. ತರುವಾಯ ಜೆ.ಟಿ. ಕಾಲೇಜು, ಗದಗದಲ್ಲಿ ಪದವಿಯನ್ನು ಮುಗಿಸಿದರು.

ಮುಂದೆ ಧಾರವಾಡದ ಮಲ್ಲಸರ್ಜನ ವ್ಯಾಯಾಮ ಶಾಲೆಯಲ್ಲಿ ದೈಹಿಕ ಶಿಕ್ಷಣ ತರಬೇತಿಯನ್ನು ಪಡೆದರು. ಇವರು ಕಾಲೇಜು ದಿನಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಮದನಪುರಿ ಗುರುಗಳು ಹಾಗೂ ವೆಂಕಣ್ಣ ಮರೆಗುದ್ದಿ ಮಾರ್ಗದರ್ಶನದಲ್ಲಿ ಒಳ್ಳೆಯ ಕ್ರೀಡಾಪಟುವಾಗಿ ಹೊರಹೊಮ್ಮಿದರು.

ಕ್ರೀಡಾಪಟುಗಳಿಗೆ ತರಬೇತಿ ನೀಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಇವರ ಅನೇಕ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆಯುವಲ್ಲಿ ಶ್ರಮಿಸಿದರು.

ಇವರು ಸ್ವ-ಗ್ರಾಮವಾದ ಹುಯಿಲಗೋಳದಲ್ಲಿ ಸ್ವಾಮಿ ವಿವೇಕಾನಂದ ಯುವಕ ಸಂಘದಿಂದ 36 ವರ್ಷಗಳವರೆಗೆ ಜಿಲ್ಲೆ ಮತ್ತು ರಾಜ್ಯಮಟ್ಟದ ಟೂರ್ನಾಮೆಂಟ್‌ಗಳನ್ನು ನಡೆಸಿದ್ದಲ್ಲದೇ ರಾಜ್ಯದಲ್ಲಿ ಹುಯಿಲಗೋಳ ಗ್ರಾಮದ ಕಬ್ಬಡ್ಡಿ ತಂಡವನ್ನು ಗುರುತಿಸುವಲ್ಲಿ ಇವರ ಶ್ರಮ ಸಾಕಷ್ಟಿದೆ.

ಇವರು ಡಿ.ಎಸ್.ಎಸ್ ಸೇರಿದಂತೆ ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ಭಾಗವಹಿಸಿ ಅನೇಕ ಹೋರಾಟಗಳನ್ನು ಮಾಡಿ ದಲಿತ ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವಲ್ಲಿ ಶ್ರಮವಹಿಸಿದ್ದಾರೆ. ಅಂಬೇಡ್ಕರರ ತತ್ವಗಳನ್ನು ಇಂದಿಗೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ತತ್ವಗಳನ್ನು ಪಾಲಿಸಿ ನಡೆದುಕೊಂಡಿದ್ದಾರೆ.

ಕಾಳೆಯವರ ಏಳಿಗೆಗೆ ಇವರ ಮಾವನವರಾದ ಜಕ್ಕಪ್ಪನವರು ವಿಶೇಷ ಮಾರ್ಗದರ್ಶನ ಮಾಡಿರುವುದನ್ನು ಸ್ಮರಿಸಬೇಕಿದೆ.
ಪ್ರಕಾಶರವರು ತುಂಬು ಕುಟುಂಬದಿಂದ ಬಂದವರು. ಇವರ ತಾಯಿಯವರಾದ ಸುಮಿತ್ರಾಬಾಯಿ ಕಾಳೆ ಆಶೀರ್ವಾದವೇ ಇವರಿಗೆ ಶ್ರೀರಕ್ಷೆ. ಇವರಿಗೆ ಇಬ್ಬರು ಸಹೋದರಿಯರು, ಪತ್ನಿ ಪ್ರೇಮಾ ಅವರು ಇವರ ಶ್ರೇಯಸ್ಸಿಗೆ ಶ್ರಮವಹಿಸಿ ತುಂಬು ಕುಟುಂಬವನ್ನು ನಿಭಾಯಿಸುವಲ್ಲಿ ಅನವರತ ಶ್ರಮಿಸಿದರು.

ಕಾಳೆಯವರು ಮಕ್ಕಳು, ಮೊಮ್ಮಕ್ಕಳೊಂದಿಗೆ ಸುಖಕರ ನಿವೃತ್ತಿಯ ಜೀವನವನ್ನು ಸಾಗಿಸುವಂತಾಗಲಿ ಮತ್ತು ಅವರಿಗೆ ಆಯುರಾರೋಗ್ಯ ಕೊಟ್ಟು ಆ ದೇವರು ಕಾಪಾಡಲೆಂದು ಕೆ.ವ್ಹಿ.ಎಸ್.ಆರ್. ಕಾಲೇಜಿನ 1984ನೇ ಪಿ.ಯು.ಸಿ. ಬ್ಯಾಚಿನ ಗೆಳೆಯರಾದ ಎಚ್.ಎನ್. ಚಿಗರಿ, ಡಾ. ವರ್ಧನ ಬಿ.ಕೆ.ಎಸ್., ಶಿವಕುಮಾರ ಕಾಳೆ, ಎಚ್.ಕೆ. ದೊಡ್ಡಮನಿ, ಎಸ್.ಟಿ. ಹರಿಜನ, ಬಿ.ಎಮ್. ಶಿವಪೂರ (ಮಾದರ), ಪಿ.ಎಸ್. ತಳವಾರ, ಆನಂದ ತಳವಾರ, ಆನಂದ ತಿಮ್ಮಾಪೂರ, ಸಿ.ಎನ್. ಕಲಕೋಟಿ, ಎಸ್.ಎಸ್. ಗುಜಮಾಗಡಿ, ನರ್ತಿ ಬಿ.ಎಲ್., ಹ್ಯಾಟಿ ಮುಂತಾದವರು ಶುಭ ಹಾರೈಸಿದ್ದಾರೆ.

– ಎಚ್.ಎನ್. ಚಿಗರಿ.


Spread the love

LEAVE A REPLY

Please enter your comment!
Please enter your name here