ವಿಜಯಸಾಕ್ಷಿ ಸುದ್ದಿ, ರೋಣ: ಗ್ರಾಮ ಹಾಗೂ ನಾಗರಿಕ ಸಮುದಾಯದ ರಕ್ಷಣೆಗೆ ನವಗ್ರಹಗಳ ಪೂಜಾ ಕಾರ್ಯ ನಿರಂತರ ನಡೆಯಬೇಕು ಎಂದು ಪತ್ರಕರ್ತ ಮೆಹೆಬೂಬ ಮೋತೆಖಾನ್ ಹೇಳಿದರು.
ಅವರು ಗುರುವಾರ ಮಾರನಬಸರಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಬಳಿ ನವಗ್ರಹ ಪೂಜಾ ಕಟ್ಟಡಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಮಾರನಬಸರಿ ಗ್ರಾಮ ಸೌಹಾರ್ದತೆಯ ಸಂಕೇತವಾಗಿದೆ. ಈ ಗ್ರಾಮದಲ್ಲಿ ಭಕ್ತಿ ಇಮ್ಮಡಿಗೊಳಿಸುವ ಧಾರ್ಮಿಕ ಕಾರ್ಯಗಳು ನಡೆಯಬೇಕು. ನಮ್ಮ ಗ್ರಾಮದಲ್ಲಿ ನವಗ್ರಹಗಳ ಪೂಜಾ ಸ್ಥಾನ ಇಲ್ಲಿವರೆಗೆ ಇದ್ದಿಲ್ಲ. ಆದರೆ ದೇವಸ್ಥಾನದ ಅರ್ಚಕರು ನವಗ್ರಹ ಮಂದಿರ ನಿರ್ಮಾಣಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಮುಖಂಡ ಶರಣಪ್ಪಜ್ಜ ಕುರಿ ಮಾತನಾಡಿ, ಮಾರನಬಸರಿ ಗ್ರಾಮದ ಮಾರುತೇಶ್ವರ ದೇವಸ್ಥಾನ ಐತಿಹಾಸಿಕ ಧಾರ್ಮಿಕ ಕೇಂದ್ರವಾಗಿದೆ. ಈ ದೇವಸ್ಥಾನಕ್ಕೆ ಜಾತಿ-ಧರ್ಮಗಳನ್ನು ಎಣಿಸದೆ ಎಲ್ಲರೂ ಆಗಮಿಸಿ ಮಾರುತೇಶ್ವರನ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಇಂತಹ ಪುಣ್ಯದ ನೆಲದಲ್ಲಿ ನವಗ್ರಹ ದೇವಸ್ಥಾನ ನಿರ್ಮಾಣದಿಂದ ನಮ್ಮ ಗ್ರಾಮಕ್ಕೆ ಒಳಿತಾಗಲಿದೆ ಎಂದರು.
ನಿವೃತ್ತ ಶಿಕ್ಷಕ ಸತ್ಯಪ್ಪ ಪೂಜಾರ ಮಾತನಾಡಿ, ಗ್ರಾಮದ ಸರ್ವ ಜನರು ಎಲ್ಲ ಹಬ್ಬಗಳನ್ನು, ಜಾತ್ರೆಗಳನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ. ಅಲ್ಲದೆ ನವಗ್ರಹ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿಯೂ ಗ್ರಾಮದ ಸರ್ವ ಜನಾಂಗದವರು ಪಾಲ್ಗೊಂಡು ತಮ್ಮ ಭಕ್ತಿಯನ್ನು ಮೆರದಿರುವುದು ಗ್ರಾಮದ ಎಕತೆಗೆ ಸಾಕ್ಷಿಯಾಗಿದೆ ಎಂದರು.
ವೇ.ಮೂ.ವಿಶ್ವನಾಥ ಭಟ್ಟ ವೈದ್ಯ ಪೂಜಾ ಕಾರ್ಯವನ್ನು ನೆರವೇರಿಸಿದರು. ಜಿ.ಪಂ ಮಾಜಿ ಉಪಾಧ್ಯಕ್ಷ ಎಸ್.ಎಚ್. ಹಾದಿಮನಿ, ಗ್ರಾ.ಪಂ ಸದಸ್ಯ ಈರಪ್ಪ ನಿಡಗುಂದಿ, ಶರಣಪ್ಪ ಸಂಗಟಿ, ಬೂದೇಶ ವಣಗೇರಿ, ಪರಸಪ್ಪ ತಳವಾರ, ನಿವೃತ್ತ ಸೈನಿಕ ಹನ್ಮಂತಪ್ಪ ಪೂಜಾರ, ಅಶೋಕ ಮ್ಯಾಗೇರಿ, ಚಂದ್ರಯ್ಯಜ್ಜ ವಸ್ತ್ರದ, ಖಾದಿರಸಾಬ ಕಳಕಾಪೂರ, ಶಿವಲಿಂಗಪ್ಪ ದಿಂಡೂರ, ಶಂಕರಗೌಡ ಮಾಲಿಪಾಟೀಲ, ಅಬ್ದುಲ್ ಹುಡೇದ ಮುಂತಾದವರಿದ್ದರು.