ಚಿಕ್ಕಮಗಳೂರು : ಬೋರ್ ವೆಲ್ ಗೆ ವಿದ್ಯುತ್ ಸಂಪರ್ಕಿಸಲು ಲೈನ್ ಎಳೆಯುವ ವಿಚಾರಕ್ಕೆ ನಡೆದ ಗಲಾಟೆಯು, ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಡೂರು ತಾಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ಜರುಗಿದೆ.
ಕಲ್ಲೇಶಪ್ಪ (55) ಮೃತ ದುರ್ದೈವಿ. ಘಟನೆ ಬಳಿಕ ಕೊಲೆ ಆರೋಪದಡಿ ವಡೇರಹಳ್ಳಿ ಪಕ್ಕದ ಆನಂದಪುರ ಗ್ರಾಮದ ಮೂವರ ಮೇಲೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೇ ತೋಟದಲ್ಲಿ 2 ಬೋರ್ ತೆಗೆಸಿದ್ದ ಕಲ್ಲೇಶಪ್ಪ, ಟಿಸಿಯಿಂದ ವಿದ್ಯುತ್ ಲೈನ್ ಎಳೆದುಕೊಂಡು ಬೋರ್ ಮೂಲಕ ತೋಟಕ್ಕೆ ನೀರಾಯಿಸ್ತಿದ್ರು, ಅದೇ ಟಿಸಿಯಿಂದ ಮತ್ತೊಂದು ಬೋರ್ ಗೆ ಕರೆಂಟ್ ಎಳೆದುಕೊಳ್ಳಲು ಯತ್ನಿಸಿದ್ದರು. ಬೇಡ ಅಂದಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ.
ಜನವರಿ 31ರಂದು ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಲ್ಲೇಸಪ್ಪ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆ ದಾಖಲಾಗಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಕಲ್ಲೇಶಪ್ಪ ಸಾವನ್ನಪ್ಪಿದ್ದಾರೆ.