ಚಿತ್ರದುರ್ಗ:- ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರ ತಾಯಿ 79 ವರ್ಷದ ಬೋವಿಹಟ್ಟಿಯ ಪುಟ್ಟಮ್ಮ ಅವರು ಇಂದು ಮುಂಜಾನೆ 5 ಗಂಟೆಗೆ ವಿಧಿವಶರಾಗಿದ್ದಾರೆ.
Advertisement
ಈ ಹಿಂದೆ ಪುಟ್ಟಮ್ಮ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದರು. ಬಳಿಕ ಮಗನ ಒತ್ತಾಯಕ್ಕೆ ಮಣಿದು ಹಿಂದೂ ಧರ್ಮಕ್ಕೆ ಮರಳಿದ್ದರು. ಇದೀಗ 79 ವರ್ಷಕ್ಕೆ ತಾಯಿ ಇಹಲೋಕ ತ್ಯಜಿಸಿದ್ದು, ಗೂಳಿಹಟ್ಟಿ ಶೇಖರ್ ಕಣ್ಣೀರು ಹಾಕಿದ್ದಾರೆ.
ಇನ್ನೂ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಪುತ್ರ ಗೂಳಿಹಟ್ಟಿ ಶೇಖರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.