ಅಪಮಾನ ಮಾಡಿದ್ದಾರೆ ಅಂದ್ರೆ ನಾವು ಬೀದಿಗೆ ಇಳಿದು ಮಾತಾಡುವ ಮಂದಿನೇ: ಬಿ ಶ್ರೀರಾಮುಲು ಗರಂ!

0
Spread the love

ಗದಗ: ರಾಮುಲು ಸುಮ್ಮನೆ ಇದ್ರು.. ಇದ್ರು.. ಅಂತಾ ಹೇಳುತ್ತಿದ್ರು.. ಇನ್ನು ಮುಂದೇ ಸುಮ್ಮನೆ ಇರೋದಿಲ್ಲ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ. ಗದಗನಲ್ಲಿ ಮಾತನಾಡಿದ ಅವರು, ದೆಹಲಿಗೆ ಅಪಾಯಿಂಟ್ಮೆಂಟ್ ಮೇಲೆ ಹೋಗುಬೇಕು ಅಂತಾನೆ ಇಲ್ಲ. ಅವಕಾಶ ಸಿಕ್ಕಾಗಲೆಲ್ಲ ಹೋಗುತ್ತಿರುತ್ತೇನೆ. ಮತ್ತೆ ಮುಂದೇನು ಹೋಗುತ್ತೇನೆ. ಎಲ್ಲಾ ವಿಚಾರವನ್ನು ರಾಷ್ಟ್ರೀಯ ನಾಯಕರಿಗೆ ಹೇಳಿ ಬರುತ್ತೇನೆ ಎಂದು ಹೇಳಿದ್ದಾರೆ.

Advertisement

ರಾಮುಲು ಸುಮ್ಮನೆ ಇದ್ರು.. ಇದ್ರು.. ಅಂತಾ ಹೇಳುತ್ತಿದ್ರು. ಇನ್ನು ಮುಂದೆ ಸುಮ್ಮನೆ ಇರೋದಿಲ್ಲ, ನಾನು ಮಾತಾಡುತ್ತೇನೆ. ಯಾರ ಮುಲಾಜು ಇಲ್ದೆ ಮಾತನಾಡುತ್ತೇನೆ. ಮಾತಾಡಿದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗಬಾರದೆಂದು ಸುಮ್ಮನೆ ಇದ್ದೆ. ಈ ಬಾರಿ ನಮ್ಮಂತಹರನ್ನ ಅಪಮಾನ ಮಾಡಿದ್ದಾರೆ ಅಂದ್ರೆ ನಾವು ಬೀದಿಗೆ ಇಳಿದು ಮಾತಾಡುವ ಮಂದಿನೇ.. ಯಾವುದನ್ನು ಲೆಕ್ಕ ಹಾಕಲ್ಲ ಎಂದು ಖಾರವಾಗಿ ಶ್ರೀರಾಮುಲು ಹೇಳಿದರು.

ರಾಮುಲು ಕಾಂಗ್ರೆಸ್‌ಗೆ ಹೋಗ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಮುಲು ಅವರು ಯಾವತ್ತೂ ಪಾರ್ಟಿ ಬಿಟ್ಟು ಹೋಗಲ್ಲ ಇದು ರಾಜ್ಯದ ಜನ್ರಿಗೆ ಗೊತ್ತಿದೆ. ಒಳ್ಳೆಯ ವ್ಯಕ್ತಿ ಆಗಿರುವ ಕಾರಣ ಕರೆದಿರಬಹುದು. ಹೋಗಬೇಕು ಅನ್ನೋದು ನನ್ನ ಮನಸ್ಥಿತಿ ಅಲ್ವಾ? ನಾನು ಹೋಗಬೇಕೆಂದ್ರೆ ನನ್ನನ್ನು ತಡೆಯೋಕೆ ಆಗುತ್ತಾ..? ಜೈಲ್ ನಲ್ಲಿ ಇಡೋಕ್ಕೆ ಆಗುತ್ತಾ.? ಈಗಿನ ಕಾಲದಲ್ಲಿ ಯಾರು ಯಾರ ಮಾತು ಕೇಳೋಲ್ಲ ಎಂದು ಹೇಳಿದರು.

ಬಿಜೆಪಿಯಲ್ಲಿ ರಾಮುಲು ಅವರಿಗೆ ಅನ್ಯಾಯ ಆಗಿದೆ ಅನ್ನು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಷ್ಟು ದಿನ ಮಾತನಾಡಿಲ್ಲ ನಾನು, ಇನ್ನೂ ಮುಂದೆ ಪಬ್ಲಿಕ್ ನಲ್ಲಿ ಮಾತನಾಡುತ್ತೇನೆ. 30 ವರ್ಷಗಳ ಕಾಲ ರಾಜಕೀಯದಲ್ಲಿದ್ದೇನೆ ನಾನು ಮಾತನಾಡಿಲ್ಲ ಎಂದ್ರೆ ಅದು ನನ್ನ ದೌರ್ಬಲ್ಯ ಅಂತಾ ತಿಳಿದುಕೊಳ್ಳಬಾರದು. ಇವಾಗ ಮಾತನಾಡೋ ಕೆಲಸ ಮಾಡುತ್ತೇನೆ ಎಂದು ಗುಡುಗಿದರು. ಈ ಸಂದರ್ಭದಲ್ಲಿ ಆಪ್ತ ಎಸ್.ಎಚ್. ಶಿವನಗೌಡ್ರ, ಕಿರಣ ಭೂಮಾ ಸೇರಿದಂತೆ ಅನೇಕರಿದ್ದರು.


Spread the love

LEAVE A REPLY

Please enter your comment!
Please enter your name here