ಬೆಂಗಳೂರು: ಸಿಎಂ ಸಹಿ ಆದ ಕೂಡಲೇ ಸುಗ್ರಿವಾಜ್ಞೆ ಫೈನಲ್ ಆಗಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸುಗ್ರಿವಾಜ್ಞೆ ಇವತ್ತು ಆಗಬಹುದು ಅನಿಸುತ್ತದೆ. ಸಿಎಂಗೆ ಆರೋಗ್ಯ ತೊಂದರೆ ಇದೆ.
Advertisement
ಕರಡು ಬಿಲ್ ಸಿಎಂ ನೋಡಬೇಕು. ಅವರು ನೋಡಿ ಸಹಿ ಹಾಕಬೇಕು. ಅವರು ಸಹಿ ಮಾಡಿ ಡ್ರಾಫ್ಟ್ ಕಳುಹಿಸುತ್ತಾರೆ. ಅದಾದ ಮೇಲೆ ಸುಗ್ರಿವಾಜ್ಞೆ ಜಾರಿ ಆಗುತ್ತದೆ ಎಂದರು.
ಈಗ ಇರೋ ಕಾನೂನಿಗೆ ಕೆಲವು ಕಾನೂನುಗಳನ್ನು ಸೇರಿಸೋ ಬಗ್ಗೆ ಚರ್ಚೆ ಆಗಿದೆ. ಹೊಸ ಕಾನೂನುಗಳನ್ನು ಸೇರ್ಪಡೆ ಮಾಡಿದ್ದೇವೆ. ಕರಡು ಪ್ರತಿ ನಾನು ನೋಡಿಲ್ಲ. ಸಿಎಂ ಸಹಿ ಆದ ಕೂಡಲೇ ಸುಗ್ರಿವಾಜ್ಞೆ ಫೈನಲ್ ಆಗಲಿದೆ ಎಂದು ತಿಳಿಸಿದರು.