ತೆರಿಗೆ ಪಾವತಿಸದ 30 ಐಷಾರಾಮಿ ಕಾರುಗಳನ್ನು ಸೀಜ್‌ ಮಾಡಿದ RTO ಅಧಿಕಾರಿಗಳು!

0
Spread the love

ಬೆಂಗಳೂರು:- ನಗರದಲ್ಲಿ ಆರ್‌ಟಿಒ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ತೆರಿಗೆ ಪಾವತಿಸದೆ ಅನಧಿಕೃತವಾಗಿ ಸಂಚರಿಸುತ್ತಿದ್ದ 30 ಐಷಾರಾಮಿ ಕಾರುಗಳನ್ನು ಸೀಜ್‌ ಮಾಡಿದ್ದಾರೆ.

Advertisement

ಜಪ್ತಿಯಾದ ಕಾರುಗಳಿಂದ 3 ಕೋಟಿ ರೂ. ತೆರಿಗೆ ವಸೂಲಿ ಆಗಬೇಕಿದೆ. ನಿನ್ನೆ ನಗರದಲ್ಲಿ ಕಾರ್ಯಚರಣೆ ಮಾಡಿದ ಆರ್‌ಟಿಒ ಅಧಿಕಾರಿಗಳು ಮಾಸೆರಾಟಿ, ಫೆರಾರಿ, ಪೋರ್ಷೆ, ರೇಂಜ್ ರೋವರ್, ಬಿಎಂಡಬ್ಲ್ಯು ಸೇರಿ 30 ಲಕ್ಸುರಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ದೆಹಲಿ, ಪುದುಚೇರಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಜಾರ್ಖಂಡ್ ಸೇರಿ ಹಲವು ರಾಜ್ಯಗಳಲ್ಲಿ ಐಷಾರಾಮಿ ಕಾರು ನೋಂದಣಿ ಮಾಡಿಸಿದ್ದರು. ಕರ್ನಾಟಕದಲ್ಲಿ ಅನಧಿಕೃತವಾಗಿ ಸಂಚಾರ ಮಾಡುತ್ತಿದ್ದ ಹಿನ್ನೆಲೆ ಸೀಜ್‌ ಮಾಡಲಾಗಿದೆ.

ಮಾಹಿತಿ ಪ್ರಕಾರ ಸಾರಿಗೆ ಉಪ ಆಯುಕ್ತ ಸಿ.ಮಲ್ಲಿಕಾರ್ಜುನ್G ನೇತೃತ್ವದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಬಿ.ಶ್ರೀನಿವಾಸ್ ಪ್ರಸಾದ್, ದೀಪಕ್, ಶ್ರೀನಿವಾಸಪ್ಪ, ರಂಜಿತ್ ಸೇರಿದಂತೆ 41 ಅಧಿಕಾರಿಗಳ ತಂಡದಿಂದ ಕಾರ್ಯಾಚರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.


Spread the love

LEAVE A REPLY

Please enter your comment!
Please enter your name here