ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ `ಮಿಸ್ಟರ್ ವಜ್ರದೇಹಿ-2025’ನ್ನು ಫೆ. 2ರಂದು ಇಲ್ಲಿನ ಅಂಬೇಡ್ಕರ ಭವನದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೋಳಿ ಉದ್ಘಾಟಿಸಿದರು. ದಿವ್ಯ ಸಾನ್ನಿಧ್ಯವನ್ನು ಬೈರನಹಟ್ಟಿಯ ವಿರಕ್ತ ಮಠದ ಪೂಜ್ಯ ಶ್ರೀ ಮ.ನಿ.ಪ್ರ. ಶಾಂತಲಿAಗ ಮಹಾಸ್ವಾಮಿಗಳು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ-ಎನ್.ಟಿ.ಟಿ.ಎಫ್ ಚೇರಮನ್ ಕೃಷ್ಣಗೌಡ ಎಚ್.ಪಾಟೀಲ, ಖ್ಯಾತ ಉದ್ದಿಮೆದಾರರಾದ ಪ್ರಸಾದ, ಕರ್ನಾಟಕ ರಾಜ್ಯ ಕುಸ್ತಿ ಸಂಘದ ಉಪಾಧ್ಯಕ್ಷ ಪ್ರಶಾಂತ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿ, ಆನಂದಸ್ವಾಮಿ ಗಡ್ಡದೇವರಮಠ, ಅನಿಲ ಪಾಟೀಲ, ವಿವೇಕ ಯಾವಗಲ್ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬ.ಬೆಳಧಡಿ ವಹಿಸಿಕೊಂಡಿದ್ದರು.
ಸ್ಪರ್ಧೆಯಲ್ಲಿ ಡಾವಣಗೇರಿಯ ಸುಶೀಲಕುಮಾರ ವಿಜೇತರಾಗಿ 25 ಸಾವಿರ ರೂ.ಗಳ ನಗದು ಬಹುಮಾನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಅನಿಲ ಬೆಳವಣಕಿ, ದೇವು ವಡೆಮ್ಮನವರ, ಪ್ರಶಾಂತ ಚೌಡಿ, ಚಂದ್ರು ಉಚ್ಚಯ್ಯನಮಠ, ಕಾರ್ತಿಕ ಕೆಂದೂರ, ಸುನಿಲ ಜಡಿ, ರಾಜು, ಸೊಹೆಲ್, ಪ್ರಸನ್, ಪುನೀತ, ಶಿವು, ಆದಿತ್ಯಾ ಮುಂತಾದವರು ಭಾಗವಹಿಸಿದ್ದರು.