ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಅಡವಿಸೋಮಾಪೂರ ಸಣ್ಣ ತಾಂಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಪಾರವ್ವ ಉಮೇಶ ಲಮಾಣಿ, ಉಪಾಧ್ಯಕ್ಷರಾಗಿ ಮಂಜಪ್ಪ ಲಕ್ಷ್ಮಣ ರಜಪೂತ ಹಾಗೂ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
Advertisement
ಆಯ್ಕೆಯಾದ ಸರ್ವ ಸದಸ್ಯರಿಗೆ ಶಾಲೆಯ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಮುಖ್ಯಶಿಕ್ಷಕ ಮಲ್ಲೇಶ ಡಿ.ಎಚ್ ಮಾತನಾಡಿ ಎಸ್‌ಡಿಎಂಸಿಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಶಿಕ್ಷಕರಾದ ಎಸ್.ಜಿ. ಅಮ್ಮಿನಭಾವಿ, ಎಸ್.ಟಿ. ಹಳಕಟ್ಟಿ, ಪಿ.ಬಿ. ಕಿಲಬನವರ, ಶಾಲಾ ಮೇಲುಸ್ತುವಾರಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮಾರುತಿ ಪವಾರ, ಹನುಮಂತ ಲಮಾಣಿ, ವೆಂಕಟೇಶ ರಾಠೋಡ ಗಂಗವ್ವ ಲಮಾಣಿ, ಸಾವಿತ್ರಿ ರಾಠೋಡ, ದೇವಕ್ಕ ಲಮಾಣಿ ಇದ್ದರು.