ಇನ್ನೊಬ್ಬರ ಜೀವನಕ್ಕೆ ಬೆಳಕಾಗಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ದೀಪದ ಬೆಳಕು ಜಗತ್ತಿನ ಎಲ್ಲಕ್ಕಿಂತ ಶ್ರೇಷ್ಠ. ಅದಿಲ್ಲದಿದ್ದರೆ ಎಲ್ಲವೂ ಏನೂ ಇಲ್ಲ ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಸೋಮವಾರ ಪಟ್ಟಣದ ಕದರಗೇರಿ ಓಣಿಯಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಶಿವರುದ್ರಮ್ಮ ದೇವಿ ದೇವಸ್ಥಾನದ ವಾರ್ಷಿಕೋತ್ಸವ, ಪಲ್ಲಕ್ಕಿ, ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮನೆ ಬೆಳಗಲು ಭೌತಿಕ ದೀಪವಿರುವಂತೆ ಅಂತರಾತ್ಮ ಬೆಳಗಲು ಜ್ಞಾನದ ಬೆಳಕು ಅಗತ್ಯ. ಧಾರ್ಮಿಕವಾಗಿ ದೇವಸ್ಥಾನದಲ್ಲಿ ಕಾರ್ತಿಕ ದೀಪ ಬೆಳಗಿಸುವ ಜತೆಗೆ ಪ್ರತಿಯೊಬ್ಬರೂ ಅಂತರಾತ್ಮದ ಜ್ಯೋತಿ ಬೆಳಗಿಸಿಕೊಂಡು ಮತ್ತೊಬ್ಬರ ಜೀವನಕ್ಕೆ ಬೆಳಕಾಗಬೇಕು. ಶರಣರ ಜ್ಞಾನಾಮೃತದ ಪ್ರವಚನ ಮನುಷ್ಯನ ಬದುಕಿಗೆ ದಾರಿದೀಪವಾಗುತ್ತವೆ ಎಂದರು.

ಹರ್ಲಾಪೂರ-ಹಳ್ಳಿಗುಡಿಯ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಜೀವನ ದರ್ಶನ ಪ್ರವಚನ ನೀಡಿದರು. ಈ ವೇಳೆ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ದೇವಪ್ಪ ಮಲ್ಲೂರ, ಯಲ್ಲಪ್ಪ ಅಡರಕಟ್ಟಿ, ಮಹದೇವಪ್ಪ ಗಿಡಿಬಿಡಿ, ಕಾಶಪ್ಪ ಲಿಂಗಶೆಟ್ಟಿ, ಪುಲಿಕೇಶಿ ಬಟ್ಟೂರು, ಈರಪ್ಪ ಹಾದಿಮನಿ, ಶಿವಯೋಗೆಪ್ಪ ಚಂದರಗಿ, ಗಂಗಾಧರ ಶಿರಗಣ್ಣನವರ ಸೇರಿ ಹಲವರಿದ್ದರು. ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಸೋಮಣ್ಣ ಉಪನಾಳ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here