ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ರನ್ನು ಮದುವೆಗೆ ಕರೆದಿಲ್ವಾ ಡಾಲಿ ಧನಂಜಯ್: ಅಸಲಿಗೆ ಇಬ್ಬರ ನಡುವೆ ಏನಾಯ್ತು?

0
Spread the love

ಸ್ಯಾಂಡಲ್‌ವುಡ್‌ ಖ್ಯಾತ ನಟ ಡಾಲಿ ಧನಂಜಯ್‌ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ಫೆ.೧೪ರಂದು ಡಾ.ಧನ್ಯತಾ ಜೊತೆ ಡಾಲಿ ಧನಂಜಯ್‌ ಮದುವೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಲವರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ. ಮದುವೆಗೆ ಇನ್ನೂ ೯ ದಿನ ಬಾಕಿ ಇದೆ. ಈ ಮಧ್ಯೆ ಸುದ್ದಿಗೋಷ್ಠಿ ನಡೆಸಿ ಡಾಲಿ ಹಾಗೂ ದನ್ಯತಾ ಪ್ರೀತಿ, ಪ್ರೇಮ ಹಾಗೂ ವಿವಾಹ ಸಮಾರಂಭದ ಬಗ್ಗೆ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ದರ್ಶನ ಅವರನ್ನು ಮದುವೆಗೆ ಆಹ್ವಾನಿಸಿರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Advertisement

ಇದೇ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಮದುವೆ ಸಮಾರಂಭ ಆಯೋಜಿಸಲಾಗಿದೆ. ಸದ್ಯ ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಮದುವೆ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ ನಟ ಧನಂಜಯ್. ಈಗಾಗಲೇ ಮದುವೆಗೆ ಚಿತ್ರರಂಗ, ರಾಜಕೀಯ, ಕ್ರೀಡೆ, ಅಭಿಮಾನಿಗಳು ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರನ್ನು ಆಹ್ವಾನಿಸಿದ್ದಾರೆ.

ಸುದ್ದಿಗೋಷ್ಠಿ ದರ್ಶನ್‌ರನ್ನು ಮದುವೆಗೆ ಆಹ್ವಾನಿಸದಿರುವ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಟ, ಎಲ್ಲರನ್ನೂ ಮದುವೆ ಕರೆಯುತ್ತಿದ್ದೇನೆ. ಅಂದ್ಮಲೆ ಅವರನ್ನು ಕರೆಯುವ ಪ್ರಯತ್ನ ಮಾಡಿರುತ್ತೇನೆ. ಆದರೆ, ಅವರನ್ನು ರೀಚ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ತುಂಬಾನೇ ಪ್ರೀತಿಯಿಂದ ಅವರನ್ನು ಇಲ್ಲಿಂದಲೇ ಕರೆಯುತ್ತೇನೆ ಎಂದರು.

ಈ ಹಿಂದೆ ಡಾಲಿ ಅವರು ನಟ ದರ್ಶನ್ ಅವರ ಜೊತೆಗೆ ಆಪ್ತರಾಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಯಜಮಾನ ಸಿನಿಮಾದಲ್ಲಿ ಮಿಠಾಯಿ ಸೂರಿ ಪಾತ್ರದಲ್ಲಿ ನಟಿಸಿದ್ದರು ಡಾಲಿ. ಇಷ್ಟೇ ಅಲ್ಲದೇ ಹಲವಾರು ಪಾರ್ಟಿಗಳಲ್ಲಿ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.

 


Spread the love

LEAVE A REPLY

Please enter your comment!
Please enter your name here