ಕುಂಭಮೇಳದಲ್ಲಿ ಪಾಲ್ಗೊಂಡ ಡಿಕೆಶಿ ಪುತ್ರಿ ಐಶ್ವರ್ಯ: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ!

0
Spread the love

ಪ್ರಯಾಗ್‌ರಾಜ್:- ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರು, ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಭಕ್ತಿ-ಭಾವ ಮೆರೆದಿದ್ದಾರೆ.

Advertisement

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಐಶ್ವರ್ಯ ಅವರು, ಕುಂಭಮೇಳದಲ್ಲಿ ಕಳೆದ ಅದ್ಭುತ ಕ್ಷಣಗಳ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ತಂದೆ ಡಿ.ಕೆ.ಶಿವಕುಮಾರ್‌ ಕುಂಭಮೇಳಕ್ಕೆ ಹೋಗುವ ಮುನ್ನ ಐಶ್ವರ್ಯ ಭೇಟಿ ಕೊಟ್ಟಿದ್ದಾರೆ. ಇದೇ ಫೆ.9, 10 ರಂದು ಕುಂಭಮೇಳಕ್ಕೆ ತೆರಳುವುದಾಗಿ ಡಿಕೆಶಿ ಹೇಳಿದ್ದರು ಎನ್ನಲಾಗಿದೆ.

ಇನ್ನೂ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವ 2025ರ ಮಹಾ ಕುಂಭಮೇಳಕ್ಕೆ ಜ.13 ರಂದು ಅದ್ದೂರಿ ಚಾಲನೆ ಸಿಕ್ಕಿದೆ. 144 ವರ್ಷಗಳ ಬಳಿಕ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಫೆ.26 ರ ವರೆಗೆ ಉತ್ಸವ ಜರುಗಲಿದೆ.


Spread the love

LEAVE A REPLY

Please enter your comment!
Please enter your name here