ಯಾರೇ ಆದರೂ ಪಾರ್ಟಿ ವೇದಿಕೆಯಲ್ಲಿ ಮಾತ್ರ ಮಾತಾಡಿ: ಸುಧಾಕರ್ ರೆಡ್ಡಿ ವಾರ್ನಿಂಗ್!

0
Spread the love

ಬೆಂಗಳೂರು:- ರಾಜ್ಯ ಬಿಜೆಪಿ ನಾಯಕರು ಬಹಿರಂಗವಾಗಿ ಮಾತನಾಡಬಾರದು. ಯಾರೇ ಆದರೂ ಪಾರ್ಟಿ ವೇದಿಕೆಯಲ್ಲಿ ಮಾತ್ರ ಮಾತಾಡಿ ಎಂದು ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ವಾರ್ನಿಂಗ್ ಕೊಟ್ಟಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸುಧಾಕರ್ ರೆಡ್ಡಿ, ನಾನು ಪ್ರತಿಯೊಬ್ಬರಿಗೂ ಹೇಳುತ್ತೇನೆ. ಎಲ್ಲರೂ ಅತಿ ಮುಖ್ಯ ಹಿರಿಯರು. ಮಾಧ್ಯಮ ಮೂಲಕ ನಾವು ಎಲ್ಲರ ವ್ಯೂ ನೋಡಿದ್ದೇವೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಆಂತರಿಕ ಚುನಾವಣಾ ಮುಕ್ತಾಯ ಆಗಿದೆ. ಕರ್ನಾಟಕದಲ್ಲಿ ಕೂಡ ಆ ಪ್ರೊಸಿಜರ್ ನಡೆಯುತ್ತಿದೆ. ಈಗಾಗಲೇ ಅನೇಕ ಜಿಲ್ಲಾಧ್ಯಕ್ಷರ ಆಯ್ಕೆ ಆಗಿದೆ. ಯಾರೇ ಮಾತಾಡುವುದು ಇದ್ದರೂ ಪಾರ್ಟಿ ವೇದಿಕೆಯಲ್ಲಿ ಮಾತಾಡಿ ಎಂದು ಮನವಿ ಮಾಡಿದರು.

ರಾಜ್ಯದ ಯಾವುದೇ ನಾಯಕರು ಆಗಲಿ A ಅಥವಾ B ಯಾರೇ ಆಗಲಿ, ಒಂದು ವೇದಿಕೆಯಲ್ಲಿ ಚರ್ಚೆ ಮಾಡಲಿ. ಪಾರ್ಟಿಯ ಗೈಡ್‌ಲೈನ್ಸ್ ಅಡಿ ನಡೆಯಬೇಕು. ಭ್ರಷ್ಟಾಚಾರದ ಕಾಂಗ್ರೆಸ್ ಇದೆ. ಜನರ ವಿರೋಧ ಕಾಂಗ್ರೆಸ್ ಮೇಲೆ ಇದೆ. ಸ್ವತಃ ಸಿದ್ದರಾಮಯ್ಯ ಆರೋಪ ಹೊತ್ತಿದ್ದಾರೆ. ಹೀಗಾಗಿ ಎಲ್ಲರೂ ಶಾಂತ ರೀತಿಯಲ್ಲಿ, ಸಹೋದರ ಭಾವದಲ್ಲಿ ಶಿಸ್ತಿನಿಂದ ನಡೆಯಬೇಕು. ಏನೇ ಸಮಸ್ಯೆ ಇದ್ದರೂ ಪಕ್ಷ ಅದನ್ನು ನೋಡಿಕೊಳ್ಳಲಿದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here