ಸದಸ್ಯತ್ವ ನೋಂದಣಿಗೆ ಕಾಲಾವಧಿ ವಿಸ್ತರಿಸಲು ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅಂಜುಮನ್ ಸಂಸ್ಥೆಯ ಚುನಾವಣೆಗಾಗಿ ವಕ್ಫ್ ಬೋರ್ಡ್ನಿಂದ ಸದಸ್ಯತ್ವ ನಡೆಸಲಾಗುತ್ತಿದ್ದು, ಸದಸ್ಯತ್ವ ನೋಂದಣೆಗೆ ಕಾಲಾವಧಿಯನ್ನು ವಿಸ್ತರಿಸಬೇಕೆಂದು ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮುಖಂಡರು ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಪಾರ್ಟಿಯ ಅಧ್ಯಕ್ಷರಾದ ಜೀವನಸಾಬ ಉಮಚಗಿ ಮನವಿ ಸಲ್ಲಿಸಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಮುಸ್ಲಿಂ ಸಮುದಾಯ ಜನರು ಗದಗ-ಬೆಟಗೇರಿ ನಗರದಲ್ಲಿ ವಾಸವಾಗಿದ್ದಾರೆ. ನಮ್ಮ ಸಮುದಾಯದ ದೊಡ್ಡ ಸಂಸ್ಥೆಯಾದ ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಚುನಾವಣೆ ನಡೆಸಲು ಜಿಲ್ಲಾ ವಕ್ಫ್ ಬೋರ್ಡ್ನಿಂದ ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ಅಧಿಕಾರಿಗಳು ಈಗಾಗಲೇ ಎಸ್.ಎಂ. ಕೃಷ್ಣಾ ನಗರದಲ್ಲಿರುವ ಅಂಜುಮನ್ ಸಂಸ್ಥೆಯ ಕಾರ್ಯಾಲಯದಲ್ಲಿ ಚುನಾವಣೆಗಾಗಿ ಸದಸ್ಯತ್ವ ನೋಂದಣೆ ಕಾರ್ಯವನ್ನು ಪ್ರಾರಂಭಿಸಿದ್ದಾರೆ.

ಸದಸ್ಯತ್ವ ನೋಂದಣಿ ಮಾಡಿಕೊಳ್ಳಲು 20-02-2025ರವರೆಗೆ ಸಮಯ ನೀಡಲಾಗಿದೆ. ಗದಗ-ಬೆಟಗೇರಿ ನಗರದ ಮುಸ್ಲಿಂ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಕಾಲಾವಕಾಶ ನೀಡಬೇಕು. ನಗರದ ಮಧ್ಯಭಾಗದಲ್ಲಿರುವ ಎಸ್.ಎಂ. ಕೃಷ್ಣಾ ನಗರದಲ್ಲಿರುವ ಅಂಜುಮನ್ ಸಂಸ್ಥೆಯ ಕಾರ್ಯಾಲಯದಲ್ಲಿಯೇ ಸದಸ್ಯತ್ವ ನೋಂದಣಿ ಕಾರ್ಯವನ್ನು ನಡೆಸಬೇಕು ಎಂದು ಒತ್ತಾಯಿಸಿದರು.

ರಶೀದ ಗೋಕಾವಿ, ಉಜೇಪಾ ಉಮಚಗಿ, ಮೆಹಬೂಬ ರೋಣ, ನಫೀಸ ಮಕಾನದಾರ, ಮುಸ್ತಾಫಾ ಶರಹಟ್ಟಿ ಮುಂತಾದವರು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here