ಸಾಹಿತ್ಯದಿಂದ ಹೃದಯಗಳು ಬೆಸೆಯುತ್ತವೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸೌಹಾರ್ದದ ಸೆಲೆ ಬತ್ತದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಸಾಹಿತ್ಯಕ್ಕಿರಬೇಕು. ಸಮಾಜದ ಓರೆಕೋರೆಗಳಿಗೆ ಸ್ಪಂದಿಸುವ ಗುಣ ಬರಹಗಾರರನಿಗೆ ಇರಬೇಕಾದುದು ಅಗತ್ಯ. ತನ್ಮೂಲಕ ಸ್ವಾಸ್ಥ್ಯ ಸಮಾಜ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಹೃದಯಗಳನ್ನು ಬೆಸೆಯುವದು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಸಾಹಿತಿ ಪ್ರೊ. ಚಂದ್ರಶೇಖರ ವಸ್ತ್ರದ ತಿಳಿಸಿದರು.

Advertisement

ಅವರು ಸಾಹಿತ್ಯ ಅಕಾಡೆಮಿ ನವದೆಹಲಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದ ಜಿಲ್ಲಾ ಕಸಾಪ ಕಾರ್ಯಾಲಯದಲ್ಲಿ ಜರುಗಿದ ಸೃಜನ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಹುಟ್ಟತ್ತಲೇ ನಾವೆಲ್ಲಾ ಸೃಜನಶೀಲರಾಗಿರುತ್ತವೆ. ನಮ್ಮೆಲ್ಲರ ಬಾಲ್ಯ ಕ್ರಿಯಾಶೀಲತೆಯಿಂದ ಕೂಡಿರುತ್ತದೆ. ಆದರೆ, ಸೃಜನಶೀಲತೆಗೆ ಇಂಬುಗೊಡುವ ಶಿಕ್ಷಣ ವ್ಯವಸ್ಥೆ ಇಲ್ಲದಿರುವರಿಂದ ಹೊಸ ಸೃಷ್ಟಿಯ ಅವಕಾಶಗಳು ನಿರೀಕ್ಷಿತ ಮಟ್ಟದಲ್ಲಿಲ್ಲದಿರುವದನ್ನು ಕಾಣುತ್ತೇವೆ. ಸೃಜನಶೀಲತೆಯ ಭಾಗವಾಗಿರುವ ಸಾಹಿತ್ಯದಿಂದ ಸಮಾಧಾನ ದೊರೆಯುತ್ತದೆ ಎಂದು ತಿಳಿಸಿದರು.

ಹೆಸರಾಂತ ಕತೆಗಾರ ಬಾಳಾಸಾಹೇಬ ಲೋಕಾಪೂರ ಹಾಗೂ ಟಿ.ಎಸ್. ಗೊರವರ ಅವ್ವನ ಅಗಾಧತೆಯನ್ನು ಪ್ರತಿಬಿಂಬಿಸುವ ಕತೆ ವಾಚಿಸಿದರು. ನಿರ್ಮಲಾ ಶೆಟ್ಟರ ಗಜಲ್ ಹಾಗೂ ಕವಿತೆಗಳನ್ನು ಪ್ರಸ್ತುತಪಡಿಸಿದರು.

ವೇದಿಕೆ ಮೇಲೆ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ ಉಪಸ್ಥಿತರಿದ್ದರು. ಡಿ.ಎಸ್. ಬಾಪುರಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಾ. ರಶ್ಮಿ ಅಂಗಡಿ ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರೊ. ಅನ್ನದಾನಿ ಹಿರೇಮಠ, ಪ್ರಕಾಶ ಕಡಮೆ, ಡಾ. ರಾಜಶೇಖರ ದಾನರಡ್ಡಿ, ಡಾ. ನಾಗಪ್ಪ ಸುರಳಿಕೇರಿ, ಬಿ.ಬಿ. ಪಾಟೀಲ, ಡಾ. ಶಿವಪ್ಪ ಕುರಿ, ಸಿ.ಕೆ.ಎಚ್. ಶಾಸ್ತ್ರಿ, ಡಾ. ಅಪ್ಪಣ್ಣ ಹಂಜೆ, ಭಾರತಿ ಕೋಟಿ, ಮಹಾಂತೇಶ ಹಿರೇಕುರುಬರ, ಜಿ.ಎ. ಪಾಟೀಲ, ಎಂ.ವಿ. ಕೆಂಬಾವಿಮಠ, ಎಚ್.ಟಿ. ಸಂಜೀವಸ್ವಾಮಿ, ಶಶಿಕಾಂತ ಕೊರ್ಲಹಳ್ಳಿ, ಸಿ.ಎಂ. ಮಾರನಬಸರಿ, ರಾಜಶೇಖರ ಕರಡಿ, ಬಿ.ಎಸ್. ಹಿಂಡಿ, ಯು.ಎಸ್. ಕಣವಿ, ರತ್ನಾ ಪುರಂತರ, ಪಾರ್ವತಿ ಬೇವಿನಮರದ, ಪ್ರ.ತೋ. ನಾರಾಯಣಪುರ, ಪಂಚಾಕ್ಷರಯ್ಯ ಹಿರೇಮಠ, ಎಚ್.ಪಿ. ಸುಬ್ಬಣ್ಣವರ, ತಿಪ್ಪಾನಾಯ್ಕ, ಶರಣಪ್ಪ ಹೊಸಂಗಡಿ, ಕೆ.ಎಂ. ಅಡವಿ, ಎಂ.ಟಿ. ಕರಿಗಾರ, ರಾಜು ಪಾಟೀಲ, ವಿಜಯ ಕಿರೇಸೂರ, ದಿಲೀಪಕುಮಾರ ಮುಗಳಿ, ಗೌರಾ ಬುಶೆಟ್ಟಿ, ಜಯಶ್ರೀ ಅಂಗಡಿ, ಶಕುಂತಲಾ ಸಿಂಧೂರ, ಅಶೋಕ ಸುತಾರ, ಅಶೋಕ ಸತ್ಯರಡ್ಡಿ, ಪ್ರಶಾಂತ ಪಾಟೀಲ, ಸುರೇಶ ಕುಂಬಾರ, ಶಾಂತಲಾ ಹಂಚಿನಾಳ, ಕೆ.ಜಿ. ವ್ಯಾಪಾರಿ, ಎನ್.ಬಿ. ಝರೆ ಮೊದಲಾದವರು ಹಾಜರಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿ ಸದಸ್ಯರಾದ ಬಸವರಾಜ ಸಾದರ ಮಾತನಾಡಿ, ಸಾಹಿತ್ಯದ ಮೂಲಕ ಹೃದಯಗಳನ್ನು ಬೆಸೆಯುವ ಕಾರ್ಯವನ್ನು ಸಾಹಿತ್ಯ ಅಕಾಡೆಮಿ ಮಾಡುತ್ತಿದೆ. ಸಾಮಾನ್ಯವಾಗಿ ಕವಿತೆಗಳನ್ನು ವಾಚಿಸುವ ಅವಕಾಶಗಳು ವೇದಿಕೆಯಲ್ಲಿ ದೊರೆಯುತ್ತವೆ. ಸಣ್ಣಕತೆ, ಪ್ರಬಂಧ ಮುಂತಾದ ಪ್ರಕಾರಗಳ ಅಭಿವ್ಯಕ್ತಿಗೆ ಈ ಕಾರ್ಯಕ್ರಮದ ಮೂಲಕ ಅವಕಾಶ ಕಲ್ಪಿಸಲಾಗಿದೆ. ಇಂದಿನ ಸಂಕೀರ್ಣ ಬದುಕಿಗೆ ಪ್ರೀತಿಯ ಸಂಗಾತವನ್ನು ಸಾಹಿತ್ಯ ನೀಡುತ್ತದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here