ಶರಣ ಸಾಹಿತ್ಯದಿಂದ ಸದೃಢ ಸಮಾಜ

0
Spread the love

ವಿಜಯಸಾಕ್ಷಿ ಸುದ್ದಿ, ರೋಣ: ಶರಣ ಸಾಹಿತ್ಯದಿಂದ ಸಮಾಜ ಸದೃಢವಾಗುವುದರಲ್ಲಿ ಸಂದೇಹವಿಲ್ಲ ಎಂದು ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಧಾ ಹುಚ್ಚಣ್ಣವರ ಹೇಳಿದರು.

Advertisement

ಅವರು ಇತ್ತೀಚೆಗೆ ಪಟ್ಟಣದ ಸಾಹಿತ್ಯ ಭವನದಲ್ಲಿ ಜರುಗಿದ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆಯ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಮಹಿಳೆಯರೂ ಸಹ ಸಾಹಿತ್ಯದ ಕಡೆಗೆ ಹೆಚ್ಚಿನ ಒಲುವು ಹೊಂದಬೇಕು. ಶರಣ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಶರಣ ಚಿಂತನೆಯಿಂದ ಸಮಾಜದ ಜೊತೆಗೆ ಕುಟುಂಬಗಳು ಸಹ ಸದೃಢವಾಗಲಿವೆ. ಶರಣ ಸಾಹಿತ್ಯವನ್ನು ಮತ್ತಷ್ಟು ಬೆಳೆಸಬೇಕು, ಇತಿಹಾಸವನ್ನು ಅರಿಯಬೇಕು. ಈ ಕಾರ್ಯಕ್ಕೆ ಮಹಿಳೆಯರು ಮುಂದೆ ಬರಬೇಕು ಎಂದರು.

ಪುರಸಭಾ ಸದಸ್ಯ ಸಂಗನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಗುರುಪಾದ ದೇವರು ಸಾನ್ನಿಧ್ಯವನ್ನು, ಕೆ.ಎ. ಬಳಿಗೇರ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಅಧ್ಯಕ್ಷೆ ಗೀತಾ ಮಾಡಲಗೇರಿ, ಕದಳಿ ವೇದಿಕೆಯ ತಾಲೂಕಾಧ್ಯಕ್ಷೆ ಶಶಿಕಲಾ ಪಾಟೀಲ, ವಿ.ಕೆ. ಪಾಟೀಲ, ಲಕ್ಷ್ಮೀ ಕೆಂಚರೆಡ್ಡಿ, ಲಕ್ಷ್ಮೀ ಗಡಗಿ, ಅನ್ನಪೂರ್ಣಾ ಹೂಗಾರ, ಛಾಯಾ ಅಚ್ಚನಗೌಡ್ರ, ವೀಣಾ ಹಾಲಣ್ಣವರ, ಪಂಚಯ್ಯ ಹಿರೇಮಠ, ವೀರುಪಾಕ್ಷಗವಡ ದೇಸಾಯಿಗೌಡ್ರ, ಮಹಾದೇವಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here