ಕೊಟ್ಟಾಯಂ:- ಆಘಾತಕಾರಿ ಘಟನೆಯೊಂದು ಕೇರಳದಲ್ಲಿ ಜರುಗಿದ್ದು, ನರ್ಸಿಂಗ್ ವಿದ್ಯಾರ್ಥಿಗಳ ಭಯಂಕರ ರ್ಯಾಗಿಂಗ್ ಬೆಚ್ಚಿಬೀಳಿಸುವಂತಿದೆ.
ಕೇರಳದ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 3ನೇ ವರ್ಷದ 5 ನರ್ಸಿಂಗ್ ವಿದ್ಯಾರ್ಥಿಗಳನ್ನು ತಮ್ಮ ಕೆಲವು ಜೂನಿಯರ್‌ಗಳಿಗೆ ದೈಹಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ರ್ಯಾಗಿಂಗ್‌ಗೆ ಸಂಬಂಧಿಸಿದಂತೆ ಬಂಧಿತ ವಿದ್ಯಾರ್ಥಿಗಳ ವಿರುದ್ಧ ಕಾಲೇಜಿನ ಮೂವರು ಜೂನಿಯರ್ ನರ್ಸಿಂಗ್ ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದಾರೆ.
ದೂರಿನ ಪ್ರಕಾರ, ಆ ಜೂನಿಯರ್ಗಳ ಬಟ್ಟೆ ಬಿಚ್ಚಿ, ಅವರ ಗುಪ್ತಾಂಗಕ್ಕೆ ಡಂಬ್ಬೆಲ್ ಕಟ್ಟಿ, ಚಿತ್ರಹಿಂಸೆ ನೀಡಲಾಗಿದೆ. ವೇಟ್‌ಲಿಫ್ಟಿಂಗ್‌ಗಾಗಿ ಬಳಸಲಾಗುವ ಡಂಬ್ಬೆಲ್ಗಳನ್ನು ಗುಪ್ತಾಂಗಕ್ಕೆ ಕಟ್ಟಿ, ಬೆತ್ತಲೆಯಾಗಿ ನಿಲ್ಲುವಂತೆ ಮಾಡಲಾಗಿದೆ. ನಂತರ ಚಿತ್ರಹಿಂಸೆ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಡಂಬ್ಬೆಲ್ಗಳನ್ನು ವಿದ್ಯಾರ್ಥಿಗಳ ಖಾಸಗಿ ಭಾಗಗಳಿಗೆ ನೇತುಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆ ವಿದ್ಯಾರ್ಥಿಗಳ ದೇಹದ ಮೇಲೆ ಗಾಯಗಳೂ ಆಗಿವೆ. ಬಳಿಕ, ಅವರ ಮುಖ, ತಲೆ ಮತ್ತು ಬಾಯಿಗೆ ಕ್ರೀಮ್ ಹಚ್ಚಿಕೊಳ್ಳಲು ಒತ್ತಾಯಿಸಲಾಯಿತು.