ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಕೆಂಚಲಾಪುರ ಓಣಿ, ಬನಶಂಕರಿ ಬಡಾವಣೆಯ ಶ್ರೀ ಬನಶಂಕರಿ ದೇವಸ್ಥಾನದ ರಥೋತ್ಸವ ಬುಧವಾರ ಸಂಜೆ ಶೃದ್ಧಾ ಭಕ್ತಿಯಿಂದ ನೆರವೇರಿತು. ಭಕ್ತರು ಉದ್ಘೋಷಗಳೊಂದಿಗೆ ರಥಕ್ಕೆ ಉತ್ತತ್ತಿ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ದೇವಿಗೆ ಅಭಿಷೇಕ, ಅಲಂಕಾರ ಪೂಜಾ, ಹೋಮ-ಹವನ ಇತ್ಯಾದಿ ಪೂಜಾ ಕೈಂಕರ್ಯಗಳು, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸತ್ಯನಾರಾಯಣ ಪೂಜಾ, ಪಲ್ಲಕ್ಕಿ ಉತ್ಸವಗಳು ನೆರವೇರಿದವು. ಬನಶಂಕರಿ ದೇವಿ ಸೇವಾ ಸಮಿತಿ ಅಧ್ಯಕ್ಷ ನಾಗರಾಜ ಗುಜರಿ, ಮಹಾಬಳೇಶ್ವರಪ್ಪ ಬೇವಿನಮರದ, ಮಹಾದೇವಪ್ಪ ಪಾತಾಳಿ, ನಾರಾಯಣಪ್ಪ ಗಾರಗಿ, ಮುರಳಿಧರ ಹುಬ್ಬಳ್ಳಿ, ಲಕ್ಷ್ಮಣ ಮೆಡ್ಲೇರಿ, ಚಿದಾನಂದ ಬೇವಿನಮರದ, ಶ್ರೀಕಾಂತ ಬೇವಿನಮರದ, ಶಂಕ್ರಪ್ಪ ಮುದಗಲ್ಲ, ಈಶ್ವರ ಮೆಡ್ಲೇರಿ, ಮಂಜುನಾಥ ಮಾಗಡಿ, ಹೊನ್ನಪ್ಪ ವಡ್ಡರ, ಸಿ.ಆರ್. ಲಕ್ಕುಂಡಿಮಠ, ಈಶ್ವರ ಯಳವತ್ತಿ, ಚನ್ನಬಸಗೌಡ ಉದ್ದನಗೌಡ್ರ, ಅಶೋಕ ಗುಳೇರ, ಅಶೋಕ ಬೇವಿನಮರದ, ಪರಶುರಾಮ ಹಣಗಿ, ಪ್ರವೀಣ ಬೇವಿನಮರದ, ಬಸವರಾಜ ನಾಗಲೋಟಿ ಸೇರಿ ಭಕ್ತರು, ಬನಶಂಕರಿ ದೇವಿ ಸೇವಾ ಸಮಿತಿ ಸದಸ್ಯರು ಇದ್ದರು.