ವಿಜಯಸಾಕ್ಷಿ ಸುದ್ದಿ, ಗದಗ: ಡಿಸೆಂಬರ್ 2024ರಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ ಬಿ.ಎಸ್ಸಿ ನರ್ಸಿಂಗ್ ಪರೀಕ್ಷೆಗಳಲ್ಲಿ ಜಿಮ್ಸ್-ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಬಿ.ಎಸ್ಸಿ ನರ್ಸಿಂಗ್ 4ನೇ ವರ್ಷದಲ್ಲಿ 88 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ 88 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ಪಡೆದಿದ್ದಾರೆ. ಒಟ್ಟು 74 ಡಿಸ್ಟಿಂಕ್ಷನ್ ಹಾಗೂ 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಶಶಿಕಲಾ ಬಿ.ಬಿ ಪ್ರಥಮ (ಶೇ.85.6), ಭೀಮವ್ವ ಜಕ್ಕಲಿ ದ್ವಿತೀಯ (ಶೇ.84.6) ಮತ್ತು ಚೈತ್ರಾ ಬಿ. ತೃತೀಯ ಸ್ಥಾನ (ಶೇ.83.6) ಪಡೆದಿದ್ದಾರೆ.
ಬಿ.ಎಸ್ಸಿ ನರ್ಸಿಂಗ್ 3ನೇ ವರ್ಷದಲ್ಲಿ 85 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ 85 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ಪಡೆದಿರುತ್ತಾರೆ. ಒಟ್ಟು 80 ಡಿಸ್ಟಿಂಕ್ಷನ್ ಹಾಗೂ 5 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ರಶ್ಮಿ ರಮೇಶ ನರಸಣ್ಣವರ ಪ್ರಥಮ (ಶೇ.84.14), ದೀಪಾ ಸೋಮಪ್ಪ ಪಿಸಿ ದ್ವಿತೀಯ (ಶೇ.83.4) ಮತ್ತು ನೇತ್ರಾವತಿ ಸಿ.ಹೆಚ್ ತೃತೀಯ ಸ್ಥಾನ (ಶೇ.82.57) ಪಡೆದಿರುತ್ತಾರೆ.
ಬಿ.ಎಸ್ಸಿ ನರ್ಸಿಂಗ್ 4ನೇ ಸೆಮಿಸ್ಟರ್‌ನಲ್ಲಿ 96 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ 96 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ಪಡೆದಿರುತ್ತಾರೆ. ಒಟ್ಟು 26 ಡಿಸ್ಟಿಂಕ್ಷನ್, 63 ಪ್ರಥಮದರ್ಜೆ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಜ್ಯೋತಿ ಮೇಟಿ (ಶೇ.81) ಪ್ರಥಮ, ಪವಿತ್ರಾ ಗೊರವರ (ಶೇ.80.33) ದ್ವಿತೀಯ ಹಾಗೂ ಸ್ನೇಹಾ ಎ.ಎಸ್ ತೃತೀಯ ಸ್ಥಾನ (ಶೇ.79) ಪಡೆದಿರುತ್ತಾರೆ.
ಬಿ.ಎಸ್ಸಿ ನರ್ಸಿಂಗ್ 2ನೇ ಸೆಮಿಸ್ಟರ್‌ನಲ್ಲಿ 96 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 92 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.95.83 ಫಲಿತಾಂಶ ಪಡೆದಿರುತ್ತಾರೆ. ಒಟ್ಟು 39 ಡಿಸ್ಟಿಂಕ್ಷನ್ ಹಾಗೂ 53 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಲಕ್ಷ್ಮೀ ತುದಿಗಾಲ (ಶೇ.81.6) ಹಾಗೂ ಪವಿತ್ರಾ ಬಮ್ಮಕ್ಕನವರ (ಶೇ.81.6) ಪ್ರಥಮ ಸ್ಥಾನ ಹಂಚಿಕೊAಡಿದ್ದು, ಲಕ್ಷ್ಮೀ ಗೌಡರ (ಶೇ.81.33) ದ್ವಿತೀಯ ಸ್ಥಾನ ಮತ್ತು ಪೂರ್ಣಿಮಾ ಮ್ಯಾಗೇರಿ (ಶೇ.81) ತೃತೀಯ ಸ್ಥಾನ (ಶೇ.78) ಪಡೆದಿರುತ್ತಾರೆ.
ಉತ್ತಮ ಫಲಿತಾಂಶ ಪಡೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು, ಪ್ರಾಂಶುಪಾಲರು, ಜಿಮ್ಸ್ ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.