HomeGadag Newsವಾತ್ಸಲ್ಯ ಮನೆ ಹಸ್ತಾಂತರ

ವಾತ್ಸಲ್ಯ ಮನೆ ಹಸ್ತಾಂತರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸಮೀಪದ ನೀಲಗುಂದ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಶಿವಮ್ಮಾ ಕಾಳೆ ಅವರಿಗೆ ಶಿಕ್ಷಕರಾದ ಎಸ್.ಎಂ. ನವಲಿ ಮನೆಯನ್ನು ಹಸ್ತಾಂತರ ಮಾಡಿದರು.

ಯೋಜನೆಯ ನಿರ್ದೇಶಕ ಎ.ಯೋಗೇಶ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿಯು ಸಮಾಜದಲ್ಲಿ ದುರ್ಬಲರು, ಆಶಕ್ತರು, ನಿರ್ಗತಿಕರನ್ನು ಗುರುತಿಸಿ ವಾತ್ಸಲ್ಯ ಯೋಜನೆಯಡಿ ಮನೆಗಳನ್ನು ಕಟ್ಟಿಸಿಕೊಡುವುದರ ಜೊತೆಯಲ್ಲಿ ಮಾಶಾಸನ ಹಾಗೂ ಅಗತ್ಯ ಸೌಲಭ್ಯಗಳೊಂದಿಗೆ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ನೆರವು ನೀಡುತ್ತಿದೆ ಎಂದರು.

ಗದಗ ತಾಲೂಕಾ ಯೋಜನಾ ನಿರ್ದೇಶಕ ಸುರೇಂದ್ರ ನಾಯಕ, ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಪೂಜಾರ, ಸದಸ್ಯರಾದ ವಿನಯ ಬಂಗಾರಿ, ಚಂದ್ರಶೇಖರ ಜಕ್ಕಮ್ಮನವರ, ಲಕ್ಷ್ಮೀ ನಾಯ್ಕರ್, ಕುಬೆರೆಡ್ಡಿ ಬಂಗಾರಿ, ದೊಡ್ಡಹನಮಪ್ಪ ಕಾಳೆ, ಎಸ್.ವಿ. ಅಮೋಘಿಮಠ, ಬಸವರಾಜ ಜಕ್ಕಮ್ಮನವರ, ರವಿ ವಗ್ಗನವರ ಇದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img