ವಿಜಯಸಾಕ್ಷಿ ಸುದ್ದಿ, ಗದಗ: ಅಕ್ಷರದೀಪ ಫೌಂಡೇಶನ್ ಗದಗ ಮತ್ತು ಸ್ನೇಹಜೀವಿ ಫೌಂಡೇಶನ್ ಮುಂಬೈ ಕರ್ನಾಟಕ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕ್ರೇಜಿ ಟ್ಯಾಲೆಂಟ್-5 ರಾಷ್ಟçಮಟ್ಟದ ಆನ್‌ಲೈನ್ ಪ್ರತಿಭಾನ್ವೇಷಣೆಯ ಚಿತ್ರಕಲಾ ಸ್ಪರ್ಧೆಯಲ್ಲಿ ಗದಗ ವಿವೇಕಾನಂದ ನಗರದ ನಿವಾಸಿಗಳಾದ ಶಿಲ್ಪಾ-ವಿಜಯಕುಮಾರ್ ಆರ್ ದಂಪತಿಗಳ ಪುತ್ರ ಚಿರಾಗ್ ವಿಜಯಕುಮಾರ್ ಆರ್ ಸ್ಪರ್ಧಿಸಿ ವಿಜೇತನಾಗಿದ್ದಾನೆ.
Advertisement
ವಿದ್ಯಾರ್ಥಿಯ ಈ ಪ್ರತಿಭೆಯನ್ನು ಗುರುತಿಸಿ `ಸ್ವರ್ಣ ಕಲಾರತ್ನ’ ಪ್ರಶಸ್ತಿ ಹಾಗೂ ಪದಕವನ್ನು ನೀಡಿ ಗೌರವಿಸಲಾಗಿದೆ ಎಂದು ಅಕ್ಷರದೀಪ ಫೌಂಡೇಶನ್ ಅಧ್ಯಕ್ಷ ಪ್ರವೀಣಕುಮಾರ ಕನ್ಯಾಳ ಹಾಗೂ ಸ್ನೇಹಜೀವಿ ಫೌಂಡೇಶನ್ ನಿರ್ದೇಶಕಿ ಶೈಲಜಾ ಪಾಟೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.