ನಟೋರಿಯಸ್ ರೌಡಿ ಬಾಗಪ್ಪ ಹರಿಜನ್ ಹತ್ಯೆ ಪ್ರಕರಣ: ನಾಲ್ವರು ಅರೆಸ್ಟ್!

0
Spread the love

ವಿಜಯಪುರ:- ಭೀಮಾತೀರದ ನಟೋರಿಯಸ್​ ರೌಡಿ ಬಾಗಪ್ಪ ಹರಿಜನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisement

ಎ1 ಪ್ರಕಾಶ್​ ಅಲಿಯಾಸ್​ ಪಿಂಟ್ಯಾ ಅಗರಖೇಡ್ (25), ಎ2 ರಾಹುಲ್ ತಳಕೇರಿ (20), ಎ3 ಗದಿಗೆಪ್ಪ ಅಲಿಯಾಸ್ ಮನಿಕಂಠ ದನಕೊಪ್ಪ (27), ಎ4 ಸುದೀಪ್ ಕಾಂಬಳೆ (23) ಬಂಧಿತ ಆರೋಪಿಗಳು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ್ ಮಾರಿಹಾಳ, ಎಎಸ್ಪಿ ಹಟ್ಟಿ, ಡಿವೈಎಸ್​ಪಿ ಬಸವರಾಜ್ ಎಲಿಗಾರ್, ಸಿಪಿಐ ಪ್ರದೀಪ್ ತಳಕೇರಿ, ಪಿಎಸ್‌ಐ ರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಘಟನೆ ಹಿನ್ನೆಲೆ:-

ಫೆಬ್ರವರಿ 11 ರಾತ್ರಿ 9:45ರ ಸುಮಾರಿಗೆ ವಿಜಯಪುರದ ಮದೀನಾ ನಗರದಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಬರ್ಬರ ಕೊಲೆ ಮಾಡಲಾಗಿತ್ತು. ಆಟೋದಲ್ಲಿ ಬಂದಿದ್ದ ನಾಲ್ಕೈದು ಮಂದಿ, ಪಕ್ಕಾ ಪ್ಲ್ಯಾನ್ ಮಾಡಿ ಮಾರಕಾಸ್ತ್ರಗಳಿಂದ ಬಾಗಪ್ಪನ ತಲೆ, ಕೈಗೆ ಹಲ್ಲೆಗೈದು, ಎಡಗೈ ಮತ್ತು ಮುಂಗೈ ಕತ್ತರಿಸಿ ಮತ್ತು ಗುಂಡು ಹಾರಿಸಿ ಸಂಬಂಧಿಕರ ಎದುರೇ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು.


Spread the love

LEAVE A REPLY

Please enter your comment!
Please enter your name here