ಯೋಧರು ನಮ್ಮ ದೇಶದ ದೊಡ್ಡ ಶಕ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪುಲ್ವಾಮಾ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಭಾರತೀಯ ಯೋಧರಿಗೆ ಶುಕ್ರವಾರ ಸಂಜೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಮೋಂಬತ್ತಿ ಮೆರವಣಿಗೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.

Advertisement

ಪಟ್ಟಣದ ಶಿಗ್ಲಿ ನಾಕಾದಿಂದ ಭಾನು ಮಾರ್ಕೆಟ್‌ನ ಹನಮಂತದೇವರ ದೇವಸ್ಥಾನವರೆಗೆ ಪರಿಷತ್ ಕಾರ್ಯಕರ್ತರು, ಯುವಕರು ಮೇಣದಬತ್ತಿ ಹಿಡಿದು ಘೋಷಣೆ ಕೂಗುತ್ತಾ ಸಾಗಿದರು.

ಈ ವೇಳೆ ಮಾತನಾಡಿದ ಪರಿಷತ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರುಣ ಬಾರ್ಕಿ, ಯೋಧರು ನಮ್ಮ ದೇಶದ ದೊಡ್ಡ ಶಕ್ತಿ ಮತ್ತು ಆಸ್ತಿಯಾಗಿದ್ದಾರೆ. ಅವರ ಮೇಲೆ ಅಟ್ಟಹಾಸ ಮೆರೆದ ಉಗ್ರರ ಕೃತ್ಯವನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ನಮ್ಮ ಭಾರತದ ಸೈನ್ಯವನ್ನು ಕೆಣಕಿದ ಯಾವುದೇ ದೇಶಕ್ಕೂ ಸಹ ತಕ್ಕ ಉತ್ತರ ನೀಡಲು ನಮ್ಮ ಸೈನ್ಯ ಸಿದ್ಧವಾಗಿದೆ. ಅಗಲಿರುವ ವೀರಯೋಧರು ಮತ್ತೊಮ್ಮೆ ಈ ನಾಡಿನಲ್ಲಿ ಹುಟ್ಟಿ ಬರಲಿ. ಅವರ ಆತ್ಮಕ್ಕೆ ದೇವರು ಚಿರಶಾಂತಿಯನ್ನು ನೀಡಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ. ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗದೇ ತಂದೆ-ತಾಯಿ, ಗುರು-ಹಿರಿಯರು, ಯೋಧರು, ರೈತರು, ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯವಾಗಬೇಕಿದೆ ಎಂದರು.

ಮೆರವಣಿಗೆಯಲ್ಲಿ ಶ್ರೀ ರಾಮಸೇನೆ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ, ಎಬಿವಿಪಿ ನಗರ ಕಾರ್ಯದರ್ಶಿ ಅಭಿಷೇಕ ಉಮುಚಗಿ, ತಾಲೂಕು ಸಂಚಾಲಕ ಪ್ರಕಾಶ ಕುಂಬಾರ, ವಿನಯ್ ಉಮಚಗಿ, ಮಹಾಂತೇಶ ಮಣಕವಾಡಿ, ಕಿರಣ ಗುಡಿಗೇರಿ, ಯಶ್ವಂತ್ ಶಿರಹಟ್ಟಿ, ಮನೋಜ್ ತಂಡಿಗೇರ, ವಿನಯ ಕುಂಬಾರ, ಶಿವರಾಜ ದುರ್ಗದ, ಅಮಿತ್ ಗುಡಿಗೇರಿ, ಬಸವರಾಜ ಆಲೂರ, ಹರೀಶ ಕಟ್ಟಿಮನಿ, ರವಿ ಪುರಾಣಿಕಮಠ ಸೇರಿ ಕಾರ್ಯಕರ್ತರಿದ್ದರು.


Spread the love

LEAVE A REPLY

Please enter your comment!
Please enter your name here