ಬೆಚ್ಚಿಬೀಳಿಸಿದ ಕರ್ನಾಟಕದ ಲಿಕ್ಕರ್ ಸ್ಕ್ಯಾಮ್: ಇದು ಕಾಂಗ್ರೆಸ್‌ನಿಂದ ಲೂಟಿ ಎಂದ ಜೆಡಿಎಸ್!

0
Spread the love

ಬೆಂಗಳೂರು:- ದೆಹಲಿ ಅಬಕಾರಿ ಹಗರಣವನ್ನು ರಾಜ್ಯದ ಲಿಕ್ಕರ್ ಸ್ಕ್ಯಾಮ್‌ ಮೀರಿಸುತ್ತಿದ್ದು, ಇದು ಕಾಂಗ್ರೆಸ್‌ನಿಂದ ಲೂಟಿ ಎಂದು ಜೆಡಿಎಸ್ ಹೇಳಿದೆ.

Advertisement

X ಮಾಡಿರುವ ಜೆಡಿಎಸ್, ಸ್ಕ್ಯಾಮ್ ಗ್ರೇಸ್ ಸರ್ಕಾರದ ಲೂಟಿ ಮಾರ್ಗಗಳು ನೂರಾರು. ರಾಜ್ಯವನ್ನು ದಿವಾಳಿ ಎಬ್ಬಿಸಿರುವ ಬರಗೆಟ್ಟ ಕಾಂಗ್ರೆಸ್ ಸರ್ಕಾರ, ಆದಾಯ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕುತಂತ್ರ ನಡೆಸುತ್ತಿದೆ. ಅಸ್ತಿತ್ವದಲ್ಲೇ ಇಲ್ಲದ ಪರವಾನಿಗೆಗಳ ಮಾರಾಟಕ್ಕೆ ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಕಾನೂನು ಬಾಹಿರವಾಗಿ ಲೈಸೆನ್ಸ್ ನೀಡಿ ಸಾವಿರಾರು ಕೋಟಿ ದುಡ್ಡು ಹೊಡೆಯಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.

ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ, ಲೈಸೆನ್ಸ್ ನವೀಕರಣ, ಮಂಥ್ಲಿ ಮನಿ ಹೆಸರಲ್ಲಿ ಕೋಟಿ ಕೋಟಿ ಹಣವನ್ನು ಅಧಿಕಾರಿಗಳಿಂದ ಸಚಿವರೇ ವಸೂಲಿ ಮಾಡುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಕಾಂಗ್ರೆಸ್ ಸರ್ಕಾರದ ಮಾನ ಹರಾಜಾಗಿದೆ.

ದೆಹಲಿಯಲ್ಲಿ ಎಎಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಹುಕೋಟಿ ಅಬಕಾರಿ ಹಗರಣ ಮೀರಿಸುವಂತೆ ಕರ್ನಾಟಕದಲ್ಲಿಯೂ ಸದ್ದಿಲ್ಲದೆ ನಡೆಯುತ್ತಿದೆ ಎಂದು ಜೆಡಿಎಸ್ ಕಿಡಿಕಾರಿದೆ.


Spread the love

LEAVE A REPLY

Please enter your comment!
Please enter your name here