ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳನ್ನು ಕಲಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:  ಪಟ್ಟಣದ ಛತ್ರಪತಿ ಶಿವಾಜಿ ಕ್ಷತ್ರಿಯ ಮರಾಠಾ ಸಂಘದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಬಸ್ತಿಬಣದ ಕೆಳಗಿನ ಕಾಮನಕಟ್ಟೆ ಹತ್ತಿರ ಅದ್ದೂರಿಯಾಗಿ ಆಚರಿಸಲಾಯಿತು.

Advertisement

ಮಂಗಳವಾರ ಮುಂಜಾನೆಯಿಂದಲೇ ಸಂಘದ ಸದಸ್ಯರು ಉತ್ಸಾಹದಿಂದ ಶಿವಾಜಿ ಮಹಾರಾಜರ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಸಕಲ ವಾದ್ಯ ವೈಭವಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಸಂಜೆ ಕಾಮನಕಟ್ಟೆಯ ಹತ್ತಿರ ಹಾಕಲಾಗಿದ್ದ ಬೃಹತ್ ವೇದಿಕೆಯಲ್ಲಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಅತಿಥಿಗಳು ಶಿವಾಜಿಯವರ ಪುತ್ಥಳಿಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ ಮತ್ತು ಜಿ.ಎಸ್. ಗಡ್ಡದೇವರಮಠ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ ಮತ್ತು ಸಾಹಸದ ಸಂಕೇತವಾಗಿದ್ದರು. ಅವರು ಕೇವಲ ಮಹಾರಾಷ್ಟçಕ್ಕೆ ಮಾತ್ರ ಸೀಮಿತರಾಗಿರಲಿಲ್ಲ, ಶಿರಹಟ್ಟಿ ತಾಲೂಕಿನ ಸೊರಟೂರು ಗ್ರಾಮದಲ್ಲಿ ಇನ್ನೂ ಸಹ ಶಿವಾಜಿಯವರ ತಲೆಮಾರಿನ ಜನರಿದ್ದಾರೆ. ತಾಲೂಕಿನ ದೇವಿಹಾಳ ಗ್ರಾಮದ ಹೊಳಲಮ್ಮದೇವಿಯ ಆಶೀರ್ವಾದ ಪಡೆದ ಶಿವಾಜಿ ತಮ್ಮ ಖಡ್ಗವನ್ನು ಧರಿಸಿದ್ದರು. ತಾಯಿ ಜೀಜಾಬಾಯಿಯವರ ಇಚ್ಛೆಯಂತೆ ಹೊಳಲಮ್ಮದೇವಿಗೆ ಸುತ್ತಲೂ ಕೋಟೆ ನಿರ್ಮಾಣ ಮಾಡಿರುವದು ಶಿವಾಜಿಯವರು.

ಸೊರಟೂರಿನಿಂದ ಕಪ್ಪತ್ತಗುಡ್ಡದವರೆಗೂ ಶಿವಾಜಿಯವರು ಕುದುರೆ ಮೂಲಕ ಓಡಾಡಿದ್ದ ಕುರುಹುಗಳಿದ್ದು, ಅವರು ಲಕ್ಷ್ಮೇಶ್ವರ ಸೋಮೇಶ್ವರನ ಭಕ್ತರಾಗಿದ್ದರು ಎಂದು ಇತಿಹಾಸ ಹೇಳುತ್ತದೆ. ಅವರ ತಾಯಿ ಜೀಜಾಬಾಯಿ ಶಿವಾಜಿ ಮಹಾರಾಜರಿಗೆ ಚಿಕ್ಕಂದಿನಲ್ಲೇ ದೇಶಕಟ್ಟುವಲ್ಲಿ ಹೋರಾಡಿದ ಮಹಾಪುರುಷರ ಜೀವನ ಸಾಧನೆಗಳನ್ನು ಹೇಳಿ ಅವರಲ್ಲಿ ಆದರ್ಶಗಳನ್ನು ತುಂಬುತ್ತಿದ್ದರು. ಜೀಜಾಬಾಯಿಯವರಂತೆ ತಮ್ಮ ಮಕ್ಕಳಿಗೆ ಉತ್ತಮ ಜೀವನ ಮೌಲ್ಯಗಳನ್ನು ಹೇಳಿಕೊಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಈಶ್ವರ ಗದಗ ಸ್ವಾಗತಿಸಿದರು, ರತ್ನಾ ಕುಂಬಾರ ನಿರೂಪಿಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹೂವಿನಶಿಗ್ಲಿ ವೀರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಹಿರಿಯರಾದ ಶಂಕರಪ್ಪ ಬೊಮ್ಮನಳ್ಳಿ, ಛತ್ರಪತಿ ಶಿವಾಜಿ ಕ್ಷತ್ರಿಯ ಮರಾಠ ಸಂಘದ ಅಧ್ಯಕ್ಷ ಈಶ್ವರ ಗದಗ, ವಿಜಯಕುಮಾರ ಹತ್ತಿಕಾಳ, ಬಸವೇಶ ಮಹಾಂತಶೆಟ್ಟರ, ಮಹಾದೇವಪ್ಪ ಅಣ್ಣಿಗೇರಿ, ಯುವ ಘಟಕ ಅಧ್ಯಕ್ಷ ಮಂಜುನಾಥ ಗದಗ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here