ವಿಜಯಸಾಕ್ಷಿ ಸುದ್ದಿ, ರೋಣ: ಕನ್ನಡ ನಾಡು-ನುಡಿಗೆ ಜಕ್ಕಲಿ ಗ್ರಾಮದ ಕೊಡುಗೆ ಅನನ್ಯವಾಗಿದೆ ಎಂದು ರೋಣ ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.
ಅವರು ಬುಧವಾರ ನಿಡಗುಂದಿಕೊಪ್ಪ ಗ್ರಾಮದಲ್ಲಿ ಜರುಗುತ್ತಿರುವ ಗಜೇಂದ್ರಗಡ ತಾಲೂಕಾ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಜಕ್ಕಲಿ ಗ್ರಾಮದಿಂದ ಆರಂಭಗೊಂಡ ಭುವನೇಶ್ವರಿ ದೇವಿಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ದಿ.ಅಂದಾನಪ್ಪ ದೊಡ್ಡಮೇಟಿಯವರ ದೇಶಪ್ರೇಮ ನಮಗೆಲ್ಲರಿಗೂ ಮಾದರಿಯಾಗಿದೆ. ಅವರ ಹೋರಾಟ ಎಂದಿಗೂ ಸ್ಮರಣೀಯ. ಇಂದು ಕನ್ನಡನಾಡು ಏಕೀರಣಗೊಂಡಿದ್ದರೆ ಅದು ದಿ.ಅಂದಾನಪ್ಪ ದೊಡ್ಡಮೇಟಿಯವರ ದಿಟ್ಟತನದ ಪ್ರತಿಫಲವಾಗಿದೆ. ಮುಖ್ಯವಾಗಿ ಜಕ್ಕಲಿ ಇತಿಹಾಸವನ್ನು ಹೊಂದಿರುವ ಗ್ರಾಮವಾಗಿದ್ದು ಗ್ರಾಮಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿ, ನೇಹರು ಸಹ ಆಗಮಿಸಿದ್ದು ತಾಲೂಕಿನ ಕಿರ್ತಿಯನ್ನು ಹೆಚ್ಚಿಸಿದೆ ಎಂದರು.
ಇದಕ್ಕೂ ಮೊದಲು ದಿ.ಅಂದಾನಪ್ಪ ದೊಡ್ಡಮೇಟಿಯವರ ನಿವಾಸದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು. ಅಭಿನವ ಚನ್ನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎಂ.ಎ. ಹಿರೇವಡೆಯರ ಅಧ್ಯಕ್ಷತೆ ವಹಿಸಿದ್ದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಮೇಶ ಪಲ್ಲೇದ, ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ತಾ.ಪಂ ಮಾಜಿ ಸದಸ್ಯರಾದ ಅಂದಪ್ಪ ಬಿಚ್ಚೂರ, ಸಂದೇಶ ದೊಡ್ಡಮೇಟಿ, ರವೀಂದ್ರನಾಥ ದೊಡ್ಡಮೇಟಿ, ಅಶೋಕ ಯಾವಗಲ್ಲ, ಮುತ್ತು ಮೇಟಿ, ತಾ.ಪಂ ಇಒ ಚಂದ್ರಶೇಖರ ಕಂದಕೂರ, ಎಸ್.ಎಸ್. ರಿತ್ತಿ, ಸಿ.ಕೆ. ಕೇಸರಿ, ಬಸವರಾಜ ದೇಸಾಯಿಪಟ್ಟಿ ಸೇರಿದಂತೆ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.