ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಹೊಡೆತ ಹೆಚ್ಚಾಗಿದ್ದು, ತಂಪಾದ ಸ್ಥಳಗಳನ್ನು ಹುಡುಕುತ್ತಾ ವಿಷಕಾರಿ ಹಾವುಗಳು ಮನೆಗಳೊಳಗೆ ನುಗ್ಗುತ್ತಿವೆ. ಹೀಗಾಗಿ ಸಿಟಿ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ.
ಅಡುಗೆ ಮನೆ, ಹಾಲ್, ಬಾತ್ ರೂಮ್, ವಾಟರ್ ಟ್ಯಾಂಕ್ ಸೇರಿದಂತೆ ಎಲ್ಲಾ ಕಡೆ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಮನೆಯೊಳಗೆ ಇರಲು ನಿವಾಸಿಗಳು ಭಯ ಬೀಳುತ್ತಿದ್ದಾರೆ. ಈ ಬಗ್ಗೆ ಉರಗ ತಜ್ಞ ಮೋಹನ್ ಮಾತನಾಡಿ, ಜನವರಿ, ಫೆಬ್ರವರಿ ಹಾವುಗಳು ಮಿಲನವಾಗುವ ಸಮಯ. ಹೀಗಾಗಿ, ತಂಪಾಗಿರುವ ಜಾಗವನ್ನು ಅರಿಸಿಕೊಂಡು ಹಾವುಗಳು ಮನೆಯೊಳಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪೋಷಕರು ನಿಮ್ಮ ಮಕ್ಕಳ ಮೇಲೆ ನಿಗಾ ಇಟ್ಟಿರಿ. ಮನೆಗಳಲ್ಲಿ ಹಾವುಗಳು ಕಾಣಿಸಿಕೊಂಡಾಗ ಯೂಟ್ಯೂಬ್, ಸಾಮಾಜಿಕ ಜಲತಾಣ ನೋಡಿ ಹಾವುಗಳು ಹಿಡಿಯಲು ಹೋಗಬೇಡಿ. ಇದರಿಂದ ಹಾವುಗಳು ಸಾಯಬಹುದು ಇಲ್ಲವೇ, ವಿಷಕಾರಿ ಸರ್ಪಗಳು ಕಚ್ಚಿ ಸಾವು-ನೋವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ದಯವಿಟ್ಟು ಎಚ್ಚರದಿಂದ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.



