ಕೊಪ್ಪಳ:- ತುಂಗಭದ್ರಾ ನದಿಯಲ್ಲಿ ರೀಲ್ಸ್ ಮಾಡಲು ಹೋಗಿ ಹೈದರಾಬಾದ್ ಮೂಲದ ವೈದ್ಯೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ನಿಶಾಮಕ ಸಿಬ್ಬಂದಿಗಳ ಸತತ ಕಾರ್ಯಾಚರಣೆಯಿಂದ ಯುವತಿ ಶವ ಕೊನೆಗೂ ಪತ್ತೆಯಾಗಿದೆ.
ಹೈದರಾಬಾದ್‌ನ ನಾಂಪಲ್ಲಿ ಪ್ರದೇಶದ ನಿವಾಸಿ ಅನನ್ಯ ಮೋಹನ್ ಮೃತ ವೈದ್ಯೆ. ಗಂಗಾವತಿ ತಾಲೂಕಿನ ಸಣಾಪೂರ ಗ್ರಾಮದಲ್ಲಿರುವ ತುಂಗಾಭದ್ರಾ ನದಿಯಲ್ಲಿ ಬುಧವಾರ ಮುಂಜಾನೆ ತುಂಗಾಭದ್ರಾ ನದಿಗೆ ಹೋಗಿ, ಕಲ್ಲುಬಂಡೆಗಳ ಮೇಲಿಂದ ಯುವತಿ ನದಿಗೆ ಜಿಗಿಯಲು ಸಿದ್ದವಾಗಿದ್ದಾಳೆ. ಆರಂಭದಲ್ಲಿ ವಿಡಿಯೋ ಮಾಡ್ತಿದ್ದ ಸ್ನೇಹಿತರಿಗೆ ಖುಷಿಯಿಂದಲೇ ಹಾಯ್ ಹೇಳಿದ್ದಾಳೆ. ಆದರೆ, ನದಿಗೆ ಜಿಗಿದ ಕೆಲವೇ ನಿಮಿಷಗಳಲ್ಲಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಳು.
ನೀರಿನಲ್ಲಿ ಧುಮುಕಿದ್ದ ಸ್ಥಳದಿಂದ 400 ಮೀ. ದೂರದಲ್ಲಿ ಗುರುವಾರ ಸಂಜೆ ವೇಳೆಗೆ ಶವವಾಗಿ ಪತ್ತೆಯಾಗಿದ್ದಾಳೆ. ಅನನ್ಯಾರಾವ್, ಹೈದ್ರಾಬಾದ್‌ನ ಮೇದಕ್ ಕ್ಷೇತ್ರದ ಶಾಸಕ ರೋಹಿತ್ ಮೈನಪಲ್ಲಿಯ ಸಂಬಂಧಿಯಾಗಿದ್ದಾಳೆ. ಸುದ್ದಿ ತಿಳಿದು ಸ್ಥಳಕ್ಕೆ ಶಾಸಕರ ಕುಟುಂಬಸ್ಥರು, ಅನನ್ಯರಾವ್ ಕುಟುಂಬಸ್ಥರು ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.