ಮೈಸೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಇಂದು ಮೈಸೂರಿಗೆ ಆಗಮಿಸಿದ್ದು, ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ವಿಶೇಷ ಪೂಜೆ ಬಳಿಕ ಮಾಧ್ಯಮಾಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ದೇವಾಲಯದಿಂದ ಹಾಗೆಯೇ ಹೊರಟು ಹೋದರು.
Advertisement
ಪೂಜೆ ಬಳಿಕ ದೇವಾಲಯದ ಒಳಗೆ ಸ್ವಲ್ಪ ಕಾಲ ವಿಶ್ರಾಂತಿ ಪಡೆದ ಶಾಸಕರು, ದೇವಾಲಯದ ಒಳಗಿರುವ ವಿನಾಯಕಸ್ವಾಮಿ ಮತ್ತು ಆಂಜನೇಯಸ್ವಾಮಿಗೂ ಪೂಜೆ ಸಲ್ಲಿಸಿದರು.
ಬಳಿಕ ದೇವಾಲಯದ ಹೊರಭಾಗದಲ್ಲಿ ಅಭಿಮಾನಿಗಳಿಗೆ ಸೆಲ್ಫಿ ನೀಡಿದರು. ಈ ವೇಳೆ ಮಾಧ್ಯಮಗಳು ಅವರ ಪತ್ರಿಕ್ರಿಯೆ ಪಡೆಯಲು ಕರೆದಾಗ ಕೈ ಮುಗಿದು ಅಲ್ಲಿಂದ ಹೊರಟರು.
ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಭಿಮಾನಿಗಳು ‘ಜೈ ವಿಜಯೇಂದ್ರ, ಜೈ ಯಡಿಯೂರಪ್ಪ’ ಎಂದು ಕೂಗಿದ್ದಾರೆ. ಈ ವೇಳೆ ತೀವ್ರ ಮುಜುಗರ ಉಂಟಾಗಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿ ಅಲ್ಲಿಂದ ಹೋಗಿದ್ದಾರೆ.