ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಆಂಧ್ರ ಪ್ರದೇಶ ಸ್ಟೇಟ್ ಕ್ರಿಯೇಟಿವಿಟಿ ಆ್ಯಂಡ್ ಕಲ್ಚರ್ ಕಮಿಷನ್ ಆ್ಯಂಡ್ ಕ್ರಿಯೇಟಿವಿಟಿ ಫೈನ್ ಆರ್ಟ್ ಅಕಾಡೆಮಿ ಗುಂಟೂರು ಇವರ ಸಂಯುಕ್ತ ಆಶ್ರಯದಲ್ಲಿ 19ನೇ ವರ್ಷದ ಇಂಡಿಯನ್ ಆರ್ಟ್ ಫೆಸ್ಟಿವಲ್ ನ್ಯಾಷನಲ್ ಆರ್ಟ್ ಕಾಂಪಿಟೇಶನ್ ಆ್ಯಂಡ್ ಎಕ್ಸಿಬಿಷನ್ ಗುಂಟೂರಿನ ವೆಂಕಟೇಶ್ವರ ವಿಜ್ಞಾನ ಮಂದಿರದಲ್ಲಿ ಜರುಗಿತು.
ಈ ಕಾರ್ಯಾಗಾರಕ್ಕೆ ಗದಗ ಜಿಲ್ಲೆಯ ಯುವ ಚಿತ್ರ ಕಲಾವಿದ ಡಾ. ಜಾಕೀರಹುಸೇನ ಎಂ. ಕೊರ್ಲಹಳ್ಳಿ ಚಾಪ್‌ಕೋಲ್ ಮಾಧ್ಯಮದಿಂದ ರಚಿಸಿರುವ ಕ್ರಿಯೇಟಿವಿಟಿ ಮತ್ತು ಅಪ್ಸಟ್ರಾಕ್ಟ್ ವಿಷಯ ಪೂರಕ ಚಿತ್ರಕ್ಕೆ `ಪ್ರಗತಿ ಚಿತ್ರ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಸಮಾರಂಭದಲ್ಲಿ ಆಂಧ್ರಪ್ರದೇಶ ಸ್ಟೇಟ್ ಕ್ರಿಯೇಟಿವಿಟಿ ಆ್ಯಂಡ್ ಕಲ್ಚರ್ ಕಮಿಷನರಾದ ರೇಗುಲಾ ಮಲ್ಲಿಕಾರ್ಜುನ ರಾವ್, ಫೌಂಡರ್ ಆಫ್ ಪ್ರೆಸಿಡೆಂಟ್ ಡಾ. ಕೆ.ಪಿ. ಬಾಬು, ಡೈರೆಕ್ಟರ್ ಕೆ. ಸುನಿತಾ, ಮಹಮ್ಮದ್ ನಾಸೀರ್ ಅಹಮದ್ ಘಾರು (ಎಂ.ಎಲ್.ಎ) ಗುಂಟೂರು ಹಾಗೂ ಡಾ. ಜಿ.ವೈ. ಗಿರಿ, ಶ್ರೀನಿವಾಸ್ ತನಿರವೈಗಾರು, ಡಾ. ಚಂದ್ರಶೇಖರ್‌ಗಾರು, ತೇಜಸ್ವಿನಿ ಪೂಡಾಪತಿ ಪ್ರಶಸ್ತಿ ಪ್ರದಾನ ಮಾಡಿದರು. ಸಾಧಕ ಕಲಾವಿದ ಜಾಕೀರಹುಸೇನರಿಗೆ ನಗರದ ಎಂ.ಕೆ.ಕೆ. ಫೌಂಡೇಷನ್ ಸಂಸ್ಥೆ ಹಾಗೂ ಜಿಲ್ಲೆಯ ಕಲಾವಿದರ ಕಲಾ ಬಳಗದವರು ಅಭಿನಂದಿಸಿದ್ದಾರೆ.