ಬೆಂಗಳೂರು:- ಶನಿವಾರ ನಡೆದ WPL ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಯುಪಿ ವಾರಿಯರ್ಸ್ ಗೆ 33 ರನ್ಗಳ ಜಯ ಸಿಕ್ಕಿದೆ.
ಚಿನೆಲ್ಲಿ ಹೆನ್ರಿ ಸ್ಫೋಟಕ ಅರ್ಧಶತಕ ಹಾಗೂ ಕೊನೆ ಓವರ್ನಲ್ಲಿ ಗ್ರೇಸ್ ಹ್ಯಾರಿಸ್ ಹ್ಯಾಟ್ರಿಕ್ ವಿಕೆಟ್ ಆಟ ಡೆಲ್ಲಿ ವಿರುದ್ಧ ಯುಪಿಗೆ 33 ರನ್ಗಳ ಭರ್ಜರಿ ಜಯ ತಂದುಕೊಟ್ಟಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಟಾಸ್ಕ್ ಗೆದ್ದು ಫೀಲ್ಡಿಂಗೆ ಹೇಳಿದ ಡೆಲ್ಲಿ ತಂಡ 178 ರನ್ಗಳ ಗೆಲುವಿನ ಗುರಿಯನ್ನು ಪಡೆದುಕೊಂಡಿತ್ತು.
ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ದ ಶೆಫಾಲಿ ವರ್ಮ 30 ಎಸೆತಗಳಲ್ಲಿ 24, ಜೆಮಿಮ ರೊಡ್ರಿಗಸ್ 35 ಎಸೆತಗಳಲ್ಲಿ 56 ಗಳಿಸಿದರು. ಯುಪಿ ತಂಡದ ಕ್ರಾಂತಿ ಹಾಗೂ ಗ್ರೇಸ್ ಅಬ್ಬರದ ಬೌಲಿಂಗ್ ಗೆ ಡೆಲ್ಲಿ ತಂಡ ತನ್ನ ಎಂಟು ವಿಕೆಟ್ಗಳನ್ನು ಕಳೆದುಕೊಂಡು ಆಲ್ ಔಟ್ ಆಯ್ತು. ಇದರಿಂದ 178 ರನ್ ಗಳ ಗೆಲುವಿನ ಗುರಿ ಸಾಧಿಸಲಾಗದೆ ಸೋಲ ಅನುಭವಿಸಿತು.