ಮಂಡ್ಯ:- ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬದಹಳ್ಳಿಯ ಆಂಜನೇಯಬೆಟ್ಟದಲ್ಲಿ ನಾಡ ಬಾಂಬ್ ಸ್ಫೋಟದಿಂದಾಗಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಓರ್ವನ ಅಂಗೈ ಛಿದ್ರವಾಗಿರುವ ಘಟನೆ ಜರುಗಿದೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಹರಿಯಂತ್ ಪಾಟೀಲ್ ಹಾಗೂ ಪಾರ್ಥ ಎಂದು ಗುರುತಿಸಲಾಗಿದೆ. ಇವರು, ಜೈನ ಬಸದಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಆಂಜನೇಯ ಬೆಟ್ಟದ ದೇವಸ್ಥಾನದ ಸುತ್ತ ಸ್ವಚ್ಛಕಾರ್ಯಕ್ಕಾಗಿ ವಿದ್ಯಾರ್ಥಿಗಳು ತೆರಳಿದ್ದರು. ಈ ವೇಳೆ ವಿದ್ಯಾರ್ಥಿಗಳು ಕಸದ ರಾಶಿಗೆ ಕೈ ಹಾಕಿದ್ದು, ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಓರ್ವನ ಅಂಗೈ ಛಿದ್ರವಾಗಿದ್ದು, ಇನ್ನೋರ್ವನ ಮುಖದ ಭಾಗಕ್ಕೆ ಗಾಯವಾಗಿದೆ.
ಕಾಡು ಹಂದಿ ಬೇಟೆಗಾಗಿ ನಾಡ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಕಿಡಿಗೇಡಿಗಳ ಕೆಲಸದಿಂದ ಅಮಾಯಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ವಿದ್ಯಾರ್ಥಿಗಳಿನ್ನು ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.