ಕಲುಬುರಗಿ: ಕಂಡಕ್ಟರ್ ಮೇಲೆ ಮಹಾರಾಷ್ಟ್ರದವರು ಹಲ್ಲೆ ಮಾಡಿದ್ದು ತಪ್ಪು, ನಾನು ಖಂಡಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ಕಂಡಕ್ಟರ್ ಮೇಲೆ ಮಹಾರಾಷ್ಟ್ರದವರು ಹಲ್ಲೆ ಮಾಡಿದ್ದು ತಪ್ಪು.
ಅದನ್ನು ಖಂಡಿಸುತ್ತೇನೆ. ಮಹಾರಾಷ್ಟ್ರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಡಬಲ್ ಇಂಜಿನ್ ಸರ್ಕಾರ ಅಲ್ವಾ? ಸಮಸ್ಯೆ ಬಗೆಹರಿಸಲಿ. ನಾವು ನಮ್ಮ ನೆಲ, ಜಲ, ಗಡಿ ವಿಷಯದಲ್ಲಿ ಬದ್ದವಾಗಿದ್ದೇವೆ ಎಂದು ಹೇಳಿದ್ದಾರೆ.
ಜೆಪಿಯವರು ನನ್ನ ರಾಜೀನಾಮೆಯನ್ನು ಎಷ್ಟು ಬಾರಿ ಕೇಳಿದ್ದಾರೆ?. ಕಲಬುರಗಿಯಲ್ಲಿ ನಡೆದ ಹೋರಾಟಕ್ಕೆ ವಿಜಯೇಂದ್ರ ಏಕೆ ಬರಲಿಲ್ಲ?. ನನ್ನ ಅವರ ಮಧ್ಯೆ ಯಾವ ಒಳಒಪ್ಪಂದವೂ ಇಲ್ಲ. ಇದ್ರೆ ಬಹಿರಂಗಪಡಿಸಿ. ಅವರ ಬಗ್ಗೆ ಅತೀ ಹೆಚ್ಚು ಮಾತನಾಡೋದೇ ನಾನು ಎಂದು ಹೇಳಿದರು.



