ಬೆಂಗಳೂರು:- ಇತ್ತೀಚೆಗೆ ನಗರದಲ್ಲಿ ನಡುರಸ್ತೆಯಲ್ಲಿ ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಮಾಡಿ ವಾಹನ ಸವಾರರಿಗೆ ತೊಂದರೆ ಉಂಟು ಮಾಡಿದ್ದ ಪುಂಡರ ಮೇಲೆ ರೌಡಿಶೀಟ್ ಓಪನ್ ಆಗಿದೆ.
ಹೌದು, ನಡುರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ತಲ್ವಾರ್ ಝಳಪಿಸಿದ್ದ ಪುಂಡರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಡಿಜೆ ಹಳ್ಳಿಯಿಂದ ಹೊಸಕೋಟೆವರೆಗೆ ವ್ಹೀಲಿಂಗ್ ಮಾಡ್ತಾ ಆಟೋಟೋಪ ಮೆರೆದಿದ್ದ 14 ಪುಂಡರ ಮೇಲೆ ರೌಡಿಶೀಟ್ ಓಪನ್ ಮಾಡಲಾಗಿದೆ.
ಷಬೇ-ಎ-ಬಾರತ್ ಧಾರ್ಮಿಕ ಹಬ್ಬದ ದಿನ ಕೆಲ ಪುಂಡರು ಡಿಜೆ ಹಳ್ಳಿಯಿಂದ ಹೊಸಕೋಟೆ ವರೆಗೆ ಹೋಗಿ, ಮತ್ತೆ ವಾಪಸ್ ಡಿಜೆ ಹಳ್ಳಿವರೆಗೆ ಮಾರಕಾಸ್ತ್ರ ಹಿಡಿದು ಪುಂಡಾಟಿಕೆ ಮೆರೆದಿದ್ದಾರೆ.
ಎಲ್ಲಾ 14 ಮಂದಿ ಆರೋಪಿಗಳಿಗೆ ಸರಿಯಾಗಿಯೇ ಬುದ್ದಿ ಕಲಿಸಿರುವ ಖಾಕಿ ಎಲ್ಲರ ಮೇಲೆ ರೌಡಿಶೀಟ್ ತೆರೆಯಲಾಗಿದೆ. ಏಳು ಬೈಕ್‌ಗಳಲ್ಲಿ ಮಾರಕಾಸ್ತ್ರ ಹಿಡಿದು ವ್ಹೀಲಿಂಗ್ ಮಾಡುತ್ತಾ ಪುಂಡಾಟ ಮೆರೆದಿದ್ದ ನಯೀಮ್ ಪಾಷಾ, ಅರಫತ್, ಸಾಹೀಲ್, ಅದ್ನಾನ್, ನಂಜಾಮ್ಮದ್, ಆಸೀಫ್, ಸಮೀರ್, ಜುಬೇರ್, ರಿಹಾನ್, ಹುಸೇನ್, ಜುನೇದ್, ಅಯಾನ್, ಆಫ್ತಾಪ್ ಸೇರಿದಂತೆ 14 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಬಂಧಿತ ಎಲ್ಲರ ಮೇಲೂ ರೌಡಿಶೀಟ್ ತೆರೆದಿದ್ದಾರೆ.