ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಇಂದು ಕೋರ್ಟ್ ನಲ್ಲಿ ಮುಖಾಮುಖಿಯಾಗಿದ್ದಾರೆ. ಈ ಮೊದಲು ಅನ್ಯೋನ್ಯವಾಗಿದ್ದವರು ರೇಣುಕಾಸ್ವಾಮಿ ಕೊಲೆ ಬಳಿಕ ಇಬ್ಬರು ಮಧ್ಯೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಕೋರ್ಟ್ ನಲ್ಲಿ ಇಬ್ಬರು ಅಕ್ಕ ಪಕ್ಕ ನಿಂತಿದ್ದರು ಒಬ್ಬರ ಮುಖವನ್ನು ಒಬ್ಬರು ನೋಡದೆ ಹೋಗಿದ್ದಾರೆ.
ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ರೇಣುಕಾಸ್ವಾಮಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದರು. ಕೊಲೆ ಕೇಸ್ನಲ್ಲಿ 17ರ ಜನರ ಬಂಧನ ಆಗಿತ್ತು. ಇವರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಷರತ್ತುಗಳ ಪ್ರಕಾರ ಪ್ರತಿ ತಿಂಗಳು ಕೋರ್ಟ್ಗೆ ಹಾಜರಿ ಹಾಕಬೇಕಿತ್ತು. ಅಂತೆಯೇ ಇಂದು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ 17 ಆರೋಪಿಗಳ ವಿಚಾರಣೆ ನಡೆದಿದೆ. ಮೊದಲು ಜಡ್ಜ್ ಎಲ್ಲಾ ಆರೋಪಿಗಳ ಹೆಸರು ಕರೆದಿದ್ದಾರೆ.
ಆ ಬಳಿಕ ಕೋರ್ಟ್ನಲ್ಲಿ ಆರೋಪಿ ದರ್ಶನ್, ಪವಿತ್ರಾಗೌಡ ಮುಖಾಮುಖಿ ಆಗಿದ್ದಾರೆ. ಕೋರ್ಟ್ನಲ್ಲಿ ಮುಖಾಮುಖಿ ಆದರೂ ಇಬ್ಬರೂ ಮಾತನಾಡಿಲ್ಲ. ಕಳೆದ ಬಾರಿ ಕೋರ್ಟ್ಗೆ ಬಂದಾಗ ದರ್ಶನ್ ಹಾಗೂ ಪವಿತ್ರಾ ಪರಸ್ಪರ ಸಂಭಾಷಣೆ ನಡೆಸಿಕೊಂಡಿದ್ದರು. ಈ ಬಾರಿ ಕೋರ್ಟ್ನಲ್ಲಿ ಇಬ್ಬರು ಮಾತನಾಡದೆ ಇರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.