ಕೆಜಿಎಫ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್‌ಗಳನ್ನೂ ಮೀರಿದ ಜನಪ್ರಿಯತೆ ಈ ಸ್ಯಾಂಡಲ್‌ವುಡ್ ನಟನಿಗೆ ಸಿಕ್ಕಿದೆ. ಸದ್ಯ ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಇದರ ಜೊತೆಗೆ ರಾಮಾಯಣ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಮಧ್ಯೆ ಯಶ್ ಹೆಸರು ಮತ್ತೊಂದು ಚಿತ್ರದಲ್ಲಿ ಕೇಳಿ ಬರುತ್ತಿದ್ದು, ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಸದ್ಯ ಯಶ್ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ʼಟಾಕ್ಸಿಕ್ʼ ಚಿತ್ರದಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಟಾಕ್ಸಿಕ್ ಸಿನಿಮಾದ ಸುತ್ತ ಡ್ರಗ್ಸ್ ಡ್ರಗ್ಸ್ ಮಾಫಿಯಾದ ಕಥೆ ಹೆಣೆಯಲಾಗಿದೆ ಎನ್ನಲಾಗುತ್ತಿದೆ. ಇತ್ತ ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ʼರಾಮಾಯಣʼ ಪುರಾಣದ ಕಥೆ ಹೇಳುತ್ತದೆ. ಹೀಗೆ ಏಕಕಾಲಕ್ಕೆ ಯಶ್ 2 ವಿಭಿನ್ನ ಕಥಾಹಂದರದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ʼರಾಮಾಯಣʼದ ಮೂಕ ಬಾಲಿವುಡ್‌ಗೆ ಕಾಲಿಡುತ್ತಿರುವ ಯಶ್ ಮೊದಲ ಚಿತ್ರದಲ್ಲೇ ಪವರ್‌ಫುಲ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ರಾವಣನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡೂ ಚಿತ್ರಗಳಾದ ಬಳಿಕ ಯಶ್ ತಮಿಳು ನಿರ್ದೇಶಕನ ಸಿನಿಮಾದಲ್ಲಿ ನಟಿಸೋದು ಆಲ್ ಮೋಸ್ಟ್ ಕನ್ಪಾರ್ಮ್ ಆಗಿದೆ.
ತಮಿಳಿನ ಖ್ಯಾತ ನಿರ್ದೇಶಕ ಪಿ.ಎಸ್.ಮಿತ್ರನ್ ಅವರ ಮುಂಬರುವ ಚಿತ್ರದಲ್ಲಿ ಯಶ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. 2018ರಲ್ಲಿ ತೆರೆಕಂಡ ʼಇರುಂಬು ಥಿರೈʼ ಕಾಲಿವುಡ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಿತ್ರನ್ ಅದಾದ ಬಳಿಕ ʼಹೀರೋʼ, ʼಸರ್ದಾರ್ʼ ಮುಂತಾದ ತಮಿಳು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಅವರು ಕಾರ್ತಿ, ಎಸ್.ಜೆ.ಸೂರ್ಯ ಮತ್ತು ಆಶಿಕಾ ರಂಗನಾಥ್ ನಟನೆಯ ʼಸರ್ದಾರ್ 2ʼ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಯಶ್ ಜೊತೆ ಮಾತನಾಡಿರುವ ಮಿತ್ರನ್ ಸಿನಿಮಾ ಮಾಡಲು ಸಖತ್ ಎಕ್ಸೈಟ್ ಆಗಿದ್ದಾರೆ. ಕಥೆ ಕೇಳಿರುವ ಯಶ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ.