ಮಂಡ್ಯ: KSRTC ಬಸ್ ಚಕ್ರಕ್ಕೆ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ಪಟ್ಟಣದ KSRTC ಮುಂಭಾಗ ನಡೆದಿದೆ. ತೂಬಿನಕೆರೆ ನಿವಾಸಿ ಅರುಣ್(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ವ್ಯಕ್ತಿಯ ಆತ್ಮಹತ್ಯೆಯ ಭಯನಾಕ ದೃಶ್ಯ CCTVಯಲ್ಲಿ ಸೆರೆಯಾಗಿದೆ.
Advertisement
ಬಸ್ ಬೆಂಗಳೂರು -ಮೈಸೂರು ಹೆದ್ದಾರಿಗೆ ಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಅರುಣ್ ಏಕಾಏಕಿ ಬಸ್ಸಿನ ಹಿಂಬದಿ ಚಕ್ರಕ್ಕೆ ತಲೆಕೊಟ್ಟಿದ್ದಾನೆ. ಬಸ್ಸಿನ ಹಿಂಬದಿ ಚಕ್ರ ಯುವಕನ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಅರುಣ್ ಸಾವನ್ನಪ್ಪಿದ್ದಾನೆ. ಮದ್ದೂರು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


