ವಿಜಯಸಾಕ್ಷಿ ಸುದ್ದಿ, ಗದಗ: ಬೆಳಗಾವಿಯಲ್ಲಿ ರಾಜ್ಯ ಸಾರಿಗೆ ಬಸ್ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಸುಳ್ಳು ಪ್ರಕರಣ ದಾಖಲಿಸಿ ಪುಂಡಾಟಿಕೆ ಮೆರೆದ ಮಹಾರಾಷ್ಟ್ರದ ಎಮ್‌ಇಎಸ್ ಪುಂಡರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹೆಚ್.ಶಿವರಾಮೇಗೌಡ್ರ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾಧ್ಯಕ್ಷ ಮಂಜುನಾಥ ಪರ್ವತಗೌಡ್ರ ಮಾತನಾಡಿ, ನಮ್ಮ ರಾಜ್ಯದಲ್ಲೇ ಇದ್ದು, ನಮ್ಮ ರಾಜ್ಯದ ಎಲ್ಲಾ ಸವಲತ್ತುಗಳನ್ನು ಪಡೆದು ನಮ್ಮ ನಾಡಿಗೆ ದ್ರೋಹ ಬಗೆಯುವ ಎಮ್‌ಇಎಸ್. ಪುಂಡರ ವಿರುದ್ಧ ರಾಜ್ಯ ಸರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕೂಡಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಸಂಚಾಲಕ ಬಸವರಾಜ ದೇಸಾಯಿ ಮಾತನಾಡಿ, ನಮ್ಮ ರಾಜ್ಯದ ರಸ್ತೆ ಸಾರಿಗೆ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ ಸುಳ್ಳ್ಳು ಪ್ರಕರಣವನ್ನ ದಾಖಲು ಮಾಡಿರುವುದು ಖಂಡನಾರ್ಹ ಎಂದರು.
ಉತ್ತರ ಕರ್ನಾಟಕ ರೈತ ಘಟಕದ ಅಧ್ಯಕ್ಷ ಬಸಯ್ಯ ಗುಡ್ಡಿಮಠ ಹೋರಾಟದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಬಸವರಾಜ ಮುಳ್ಳಾಳ, ಸುರೇಶ ಮುಳಗುಂದ, ಯಮನೂರಸಾಬ ನದಾಫ್, ಸಂತೋಷ ಕುಂಬಾರ, ರಾಘವೇಂದ್ರ ಭಾಕಳೆ, ಪರಶುರಾಮ ಭನ್ನುರ, ಬಸವರಾಜ ಕಟಗಿ, ಇಬ್ರ‍್ರಾಹಿಮ್ ನದಾಫ್, ಮುದಿಯಪ್ಪ ಗಾಂಜಾರ, ಮಂಜುನಾಥ ಹಿರೇಮನಿ, ಶರಣಪ್ಪ ತಡಹಾಳ, ಸುರೇಶ ಬೂದಿಹಾಳ, ಭೀಮಪ್ಪ ಪೂಜಾರ, ಶಿವಕ್ಕ ಬೇವಿನಮರದ, ಪ್ರೇಮವ್ವ ಬೇವಿನಮರದ, ನೀಲವ್ವ ಹಿರೇಮನಿ, ಶಾಂತವ್ವ ದೊಡ್ಡಮನಿ, ದುರ್ಗವ್ವ ಹಾದಿಮನಿ, ಬಸವ್ವ ಕಟ್ಟೀಮನಿ, ರೇಣವ್ವ ಮುಳಗುಂದ, ಗಂಗವ್ವ ಹಿರೇಮನಿ, ಯಲ್ಲಪ್ಪ ಪ್ಯಾಟಿ, ಮಾರುತಿ ದೊಡ್ಡಮನಿ ಸೇರಿದಂತೆ ನೂರಾರು ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.


