ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಹಾ ಶಿವರಾತ್ರಿ ಅಂಗವಾಗಿ ಇಲ್ಲಿಯ ಬಿನ್ನಾಳ ಬಸವೇಶ್ವರ ರಥೋತ್ಸವವು ಶುಕ್ರವಾರ ಸಂಜೆ 6ಕ್ಕೆ ಸಂಭ್ರಮದಿಂದ ಜರುಗಿತು.
Advertisement
ಅಲ್ಲಮಪ್ರಭು ದೇವರ ಮಠದ ಸಿದ್ಧಲಿಂಗೆಶ್ವರ ಸ್ವಾಮೀಜಿಗಳು ವಿಧಿ-ವಿಧಾನಗಳೊಂದಿಗೆ ಪೂಜೆ ಸಲ್ಲಿಸುವದರೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ಕೋಟೆ ವೀರಭದ್ರೇಶ್ವರ ನಂದಿಕೋಲ ಸಮ್ಮಾಳ ಮೇಳ, ಶ್ರೀ ಕೃಷ್ಣ ಗೊಲ್ಲ ಯುವಕರ ಜಾಂಜ ಮೇಳಗಳು ಭಾಗವಹಿಸಿದ್ದವು. ಭಕ್ತರು ಉತ್ತತ್ತಿ, ಹಣ್ಣುಗಳು ತೇರಿಗೆ ಅರ್ಪಿಸಿ ಸಂಕಲ್ಪವನ್ನು ಸಮರ್ಪಿಸಿದರು.
ಇದಕ್ಕೂ ಪೂರ್ವ ನಂದಿ ಧ್ವಜ ಸ್ಥಾಪನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಬಸವೇಶ್ವರ ದೇವರಿಗೆ ವಿಧಿ-ವಿಧಾನಗಳೊಂದಿಗೆ ರುದ್ರಾಭೀಷೇಕ, ಎಲಿಪೂಜೆ, ಬಾಳೆ ಹಣ್ಣಿನ ಪೂಜೆ ನಡೆಯಿತು. ರಥೋತ್ಸವದ ಚಾಲನೆ ನೀಡುವ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಗ್ರಾ.ಪಂ ಸದಸ್ಯರು, ಗ್ರಾಮದ ಗಣ್ಯರು ಭಾಗವಹಿಸಿದ್ದರು.